ಬೆಂಗಳೂರು: ಕೆಲಸವನ್ನು ಹುಡುಕಿಕೊಂಡು ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ನಗರದ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.5 ದಿನಗಳ ಹಿಂದೆಯಷ್ಟೆ ಕೆಲಸವನ್ನರಸಿ ನೇಪಾಳದಿಂದ ಬೆಂಗಳೂರಿಗೆ ಯುವತಿ ಬಂದಿದ್ದರು. ಖಾಸಗಿ ಹೊಟೇಲ್ ನಲ್ಲಿ ಕ್ಯಾಶಿಯರ್ ಆಗಿದ್ದ ನೇಪಾಳ ಮೂಲದ ಸುರೇಶ್ ಎಂಬಾತ ಕೆಲಸ ಕೊಡಿಸುವುದಾಗಿ ಅಂತಾ ಹೇಳಿ ಅತ್ಯಾಚಾರ ಎಸೆಗಿದ್ದಾನೆ.ಈ ಘಟನೆ ಫೆಬ್ರವರಿ 21 ರಂದು ನಡೆದಿದ್ದು, ಯುವತಿಯನ್ನು ಕೆಲಸ ಕೊಡಿಸುವುದಾಗಿ ಹೋಟೆಲ್ ರೂಂ ಗೆ ಕರೆಸಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದಾನೆ. ಆದರೆ ಸುರೇಶ್ ಗೆ ಈ ಮೊದಲೇ ಮದುವೆಯಾಗಿರುವುದು ಯುವತಿಗೆ ಮರುದಿನ ಬೆಳಕಿಗೆ ಬಂದಿದೆ.ಈ ಪ್ರಕರಣವು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುರೇಶ್ ಪರಾರಿಯಾಗಿದ್ದನು. ಇದೀಗ ಒರಿಸ್ಸಾದ ಭುವನೇಶ್ವರದಲ್ಲಿ ಆರೋಪಿ ಸುರೇಶ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.Sign in to your account
Username or Email Address


Password

 Remember Me


