ತುಮಕೂರು: ಕುಡಿದ ಮತ್ತಲ್ಲಿ ಗಲಾಟೆ ಮಾಡ್ತಿದ್ದ ಕೆಎಸ್‍ಆರ್‍ಟಿಸಿ ಸಿಬ್ಬಂದಿ ತಮಗೆ ಬುದ್ಧಿ ಹೇಳಿದ ಟ್ರಾಫಿಕ್ ಪೊಲೀಸ್ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ.ತುಮಕೂರು ನಗರದ ಕೋಟೆ ಆಂಜನೇಯ ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಎಣ್ಣೆ ಕಿಕ್‍ನಲ್ಲಿ ತುಮಕೂರು ಕೆಎಸ್‍ಆರ್‍ಟಿಸಿ ಸಿಬ್ಬಂದಿ ಮಣಿಕಂಠ ಹಾಗೂ ಪುಟ್ಟರಾಜು ಗಲಾಟೆ ಮಾಡ್ತಿದ್ರು. ಈ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಟ್ರಾಫಿಕ್ ಪೇದೆ ಬುದ್ಧಿ ಹೇಳಿದ್ದಕ್ಕೆ, ಪೇದೆಗೆ ಅವಾಚ್ಯ ಶಬ್ದಗಳಿಂದ  ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.ಸದ್ಯ ಇಬ್ಬರನ್ನು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.Sign in to your account
Username or Email Address


Password

 Remember Me


