ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಇಂದಿನಿಂದ ಡಬಲ್ ಸಂಕಷ್ಟ. ಮೆಟ್ರೋ ಸಂಚಾರ ಸ್ಥಗಿತ ಜೊತೆಗೆ ಅರ್ಧ ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಶನಿವಾರ ರಾತ್ರಿ 9 ಗಂಟೆಯಿಂದ ಭಾನುವಾರ ರಾತ್ರಿ 11ರವರೆಗೂ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ಆರ್‍ವಿ ರಸ್ತೆ ಸ್ಟೇಷನ್‍ನಿಂದ ಯೆಲಚೇನಹಳ್ಳಿ ಸ್ಟೇಷನ್ ನಡುವೆ ಸಂಚಾರ ಸ್ಥಗಿತವಾಗಲಿದ್ದು, ಜೆಪಿ ನಗರ ಹಾಗೂ ಬನಶಂಕರಿ ಕಡೆಗೆ ಪ್ರಯಾಣಿಸುವವರಿಗೆ ಮೆಟ್ರೋ ಸೇವೆ ಇರಲ್ಲ. ತುರ್ತು ಟ್ಯ್ರಾಕ್ ಕಾಮಗಾರಿ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಮೆಟ್ರೋ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಮತ್ತೊಂದೆಡೆ ಇಂದಿನಿಂದ 5 ದಿನ ಅರ್ಧ ಬೆಂಗಳೂರಿಗೆ ಕತ್ತಲೆ ಭಾಗ್ಯ ಲಭಿಸಲಿದೆ. ಫೆಬ್ರವರಿ 28ರವರೆಗೆ ಬೆಳ್ಳಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಸರ್ಜಾಪುರ, ಹೆಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ಹೊಸೂರು ರೋಡ್, ಬೇಗೂರು, ಐಟಿಐ ಲೇಔಟ್, ಬೆಳ್ಳಂದೂರು ಸೇರಿದಂತೆ ಅರ್ಧ ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.Sign in to your account
Username or Email Address


Password

 Remember Me


