ಬೆಂಗಳೂರು: ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಡೆದಿದೆ.ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿಯ ಬಳಿ ಈ ಅಪಘಾತ ಸಂಭವಿಸಿದೆ. ಲಾರಿ, ಬಸ್ ಹಾಗೂ ಬೊಲೆರೋ ಜೀಪ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಬೊಲೆರೋ ಜೀಪಿನಲ್ಲಿದ್ದ ತುಮಕೂರು ಮೂಲದವರಾದ ಕೆಂಪರಾಜು(34) ಹಾಗೂ ರಾಕೇಶ್(28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ವೇಗವಾಗಿ ಬಂದ ಲಾರಿ ಮುಂದೆ ಸಾಗುತ್ತಿದ್ದ ಬೊಲೆರೋ ಜೀಪ್ ಹಾಗೂ ಬಸ್ ಗೆ ಗುದ್ದಿದೆ. ಬಸ್ ಹಾಗೂ ಲಾರಿ ಮಧ್ಯದಲ್ಲಿ ಸಿಲುಕಿದ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ.ಮೃತ ದೇಹಗಳನ್ನು ಜೀಪಿನಿಂದ ಹೊರತೆಗೆಯಲು ಕ್ರೇನ್ ಹಾಗೂ ಜೆಸಿಬಿ ಯಂತ್ರವನ್ನು ಸಹ ಬಳಸಲಾಗಿದ್ದು, ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. Sign in to your account
Username or Email Address


Password

 Remember Me


