ಬಳ್ಳಾರಿ: ಮಾಜಿ ಸಚಿವ, ಹಡಗಲಿ ಶಾಸಕ ಪರಮೇಶ್ವರ್ ನಾಯ್ಕ್ ಗೆ ಕಾಂಗ್ರೆಸ್ ಟಿಕೆಟ್ ನೀಡಬೇಡಿ ಅಂತ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಕಾಂಗ್ರೆಸ್ ವೀಕ್ಷಕರಿಗೆ ದೂರು ನೀಡುವ ಮೂಲಕ ಪರಮೇಶ್ವರ್ ನಾಯ್ಕ್ ವಿರುದ್ಧ ಸಿಡಿದೆದ್ದಿದ್ದಾರೆ.ಪರಮೇಶ್ವರ್ ನಾಯ್ಕ್ ಬದಲಾಗಿ ಯುವಕರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಪರಮೇಶ್ವರ್ ನಾಯ್ಕ್ ಗೆ ಟಿಕೆಟ್ ನೀಡಿದ್ರೆ ನಾವು ಪಕ್ಷದ ಪರವಾಗಿ ಕೆಲಸ ಮಾಡಲ್ಲವೆಂದು ಕಾರ್ಯಕರ್ತರು ವೀಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಯುವ ಮುಖಂಡ ಕೃಷ್ಣ ನಾಯ್ಕ್ ಸೇರಿ ಒಟ್ಟು 9 ಆಕ್ಷಾಂಕಿಗಳು ಕಾಂಗ್ರೆಸ್ ವೀಕ್ಷಕರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.ಪರಮೇಶ್ವರ್ ನಾಯ್ಕ್ ದುರಂಹಕಾರಿ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಇತಂಹವರಿಗೆ ಟಿಕೆಟ್ ನೀಡಿದ್ರೆ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಅಂತಿದ್ದಾರೆ ಕೈ ಕಾರ್ಯಕರ್ತರು.Sign in to your account
Username or Email Address


Password

 Remember Me


