ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‍ಆರ್‍ ಟಿಸಿ ರಾಜಹಂಸ ಬಸ್ ಪಲ್ಟಿ ಹೊಡೆದು ಸ್ಥಳದಲ್ಲೇ ಒಬ್ಬ ಸಾವನ್ನಪ್ಪಿ, 10 ಮಂದಿ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಸಮೀಪದ ಬಸವನಹಳ್ಳಿ ಬಳಿ ನಡೆದಿದೆ.ಸೈಯದ್ ಶಕೀಲ್ ಅಹಮದ್(45) ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ. ಮೈಸೂರಿನಿಂದ ಬೆಳಗಾವಿಗೆ ಬಸ್ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಚಾಲಕನ ಕೈ ಮುರಿದಿದೆ. ನಾಲ್ವರು ಗಂಭಿರ ಗಾಯಗೊಂಡಿದ್ದು, ನಿರ್ವಾಹಕ ಸೇರಿದಂತೆ 6 ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಕೆ.ಆರ್ ಪೇಟೆ ಸರ್ಕಾರಿ ಆಸ್ಪತ್ರೆ ಮತ್ತು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ಕುರಿತು ಕೆ.ಆರ್ ಪೇಟೆ ಡಿಪೋ ಮ್ಯಾನೇಜರ್ ಶಿವಕುಮಾರ್‍ರಿಂದ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪಿ.ಎಸ್.ಐ ಸಿದ್ದರಾಜು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Sign in to your account
Username or Email Address


Password

 Remember Me


