ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ನಿಂದ ತೀವ್ರ ಹಲ್ಲೆಗೊಳಗಾಗಿ ಅಸ್ಪತ್ರೆ ಸೇರಿರುವ ವಿದ್ವತ್‍ಗೆ ಮಲ್ಯ ಅಸ್ಪತ್ರೆಯಲ್ಲಿ ನಾಲ್ಕನೇ ದಿನವೂ ಚಿಕಿತ್ಸೆ ಮುಂದುವರೆದಿದೆ.ತೀವ್ರ ನಿಗಾ ಘಟಕದಲ್ಲಿ ವಿದ್ವತ್‍ಗೆ ಚಿಕಿತ್ಸೆ ನೀಡುತ್ತಿದ್ದು, ಮುಖದ ಊತ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಅಲ್ಲದೇ ಗಾಯದ ನೋವು ಜಾಸ್ತಿ ಇರುವುದರಿಂದ ವಿದ್ವತ್‍ಗೆ 102 ಡಿಗ್ರಿ ಜ್ವರ ಇತ್ತು. ಇದೀಗ 101 ಡಿಗ್ರಿಗೆ ಜ್ವರ ಇಳಿಮುಖವಾಗಿದ್ದು, ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡ್ತಿದ್ದಾರೆ. ಅಲ್ಲದೇ ಇನ್ನೂ ಮೂರ್ನಾಲ್ಕು ದಿನ ವಿದ್ವತ್‍ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ.  ಇದನ್ನೂ ಓದಿ: ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆವಿದ್ವತ್ ಮುಖ, ಕಣ್ಣು, ಮೂಗು, ಹಾಗೂ ಪಕ್ಕೆಲುಬುಗಳ ಮೂಳೆ ಮುರಿದಿದ್ದರಿಂದ ವಿದ್ವತ್ ಮೊದಲಿನಂತಾಗಲು ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತೆ ಎನ್ನಲಾಗಿದೆ. ಇನ್ನು ಎದೆಯ ಪಕ್ಕೆಯ ಮೂಲೆಗಳು ಮುರಿದಿರೋ ಹಿನ್ನೆಲೆ ಕೂರಲೂ ಆಗದ ಸ್ಥಿತಿಯಲ್ಲಿರುವ ವಿದ್ವತ್ ಇನ್ನೂ ಚೇತರಿಸಕೊಳ್ಳದ ಹಾಗೂ ಜ್ವರದಿಂದ ಬಳಲುತ್ತಿರೋ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪೂರಕ್ಕೆ ಕರೆದೊಯ್ಯಲು ಕುಟುಂಬ ಚಿಂತನೆ ನೆಡಸಿದೆ ಎಂದು ಸಹೋದರ ಸಾತ್ವಿಕ್ ಲೋಕನಾತ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಾಂತಿನಗರದ ಪ್ರಿನ್ಸ್ ರೌಡಿ ನಲಪಾಡ್ ಈಗ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!
ವಿದ್ವತ್ ಅರೋಗ್ಯ ವಿಚಾರಿಸಲು ರಾಘವೇಂದ್ರ ರಾಜ್‍ಕುಮಾರ್ ಅವರ ಮಗ ಗುರುರಾಜ್ ಕುಮಾರ್ ಅಗಮಿಸಿದ್ದರು. ಇದೇ ವೇಳೆ ರಾಘವೇಂದ್ರ ರಾಜ್‍ಕುಮಾರ್ ಮನೆಯಿಂದ ಊಟ ಸಹ ತಂದು ಕೊಟ್ಟಿದ್ದು, ವಿದ್ವತ್ ಶೀಘ್ರ ಗುಣವಾಗಲೀ ಅಂತ ಹಾರೈಸಿದ್ರು.https://www.youtube.com/watch?v=p8o_3v5-ZYsSign in to your account
Username or Email Address


Password

 Remember Me


