ಬಾಗಲಕೋಟೆ: ನಾಯಿ ಬೊಗಳಿದ್ದಕ್ಕೆ ಕಲ್ಲು ಎಸೆದ ಎಂಬ ಕಾರಣಕ್ಕೆ ಮಾರಾಮಾರಿ ನಡೆದು ಯುವಕನೋರ್ವ ಕೋಮಾ ಸ್ಥಿತಿ ತಲುಪಿ ಆಸ್ಪತ್ರೆ ಸೇರಿರುವ ಘಟನೆ ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.ಕೆರೂರು ಪಟ್ಟಣದ ನಿವಾಸಿಯಾದ ಚಿರಂಜೀವಿ ತೆಗ್ಗಿ ಕೋಮಾ ಸ್ಥಿತಿಗೆ ತಲುಪಿರುವ ಯುವಕನಾಗಿದ್ದು, ವಿನಾಯಕ ಹಲ್ಲೆ ನಡೆಸಿದ ಆರೋಪಿ. ಮಂಗಳವಾರ ರಾತ್ರಿ 10:30 ರ ಸುಮಾರಿಗೆ ಈ ಘಟನೆ ನಡೆದಿದ್ದು, ರಾತ್ರಿ ಊಟ ಮುಗಿಸಿ ಪಾನ್ ಶಾಪ್ ಗೆ ಬಂದು ವಾಪಸ್ಸಾಗುವ ವೇಳೆ ಚಿರಂಜೀವಿ ಹಾಗೂ ವಿನಾಯಕ ನ ಮಧ್ಯೆ ನಾಯಿಯ ವಿಚಾರವಾಗಿ ಜಗಳ ನಡೆದಿದೆ.ನಾಯಿಗೆ ಯಾರೋ ಕಿಡಿಗೇಡಿಗಳು ಕಲ್ಲು ಎಸೆದು ಹೋಗಿದ್ರು. ಆದ್ರೆ ಆ ವೇಳೆಯಲ್ಲಿ ಚಿರಂಜೀವಿ ಆ ಮಾರ್ಗವಾಗಿ ತೆರಳುತ್ತಿದ್ದಾಗ, ನಮ್ಮ ನಾಯಿಗೆ ಕಲ್ಲನ್ನು ಎಸೆದಿದ್ದು ಯಾಕೆ ಎಂದು ನಾಯಿ ಮಾಲಿಕ ವಿನಾಯಕ ಪ್ರಶ್ನಸಿದ್ದಾನೆ. ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಮಾರಮಾರಿ ಏರ್ಪಟ್ಟಿದೆ. ಆಗ ವಿನಾಯಕ್ ದೊಣ್ಣೆಯಿಂದ ಚಿರಂಜೀವಿ ತಲೆಗೆ ಜೋರಾಗಿ ಹೊಡೆದಿದ್ದಾನೆ. ಪರಿಣಾಮ ಚಿರಂಜೀವಿ ಸದ್ಯ ಕೋಮಾ ಸ್ಥಿತಿ ತಲುಪಿ ಆಸ್ಪತ್ರೆ ಸೇರಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.ಈ ಕರಿತು ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಪೊಲೀಸರು ವಿಚಾರಣೆ ನಡೆಸಿದ್ದಾರೆ.Sign in to your account
Username or Email Address


Password

 Remember Me


