ಬೆಂಗಳೂರು: ಕಾಡಿನ ರಕ್ಷಣೆ ಮಾಡಬೇಕಾದ ಅರಣ್ಯ ಸಚಿವ ರಮಾನಾಥ್ ರೈ ಟಿಂಬರ್ ಮಾಫಿಯಾಗೆ ತೆರೆಮರೆಯಲ್ಲಿ ಬೆಂಬಲ ನೀಡ್ತಿದ್ದಾರೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ಹಿಂದೆ ನಗರದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಕೈ ಹಾಕಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪರಿಸರ ಪ್ರೇಮಿಗಳು ಸಿಡಿದೆದ್ದಿದ್ರು. ಮರ ಕಡಿಯಲಾಗುತ್ತೆ ಮತ್ತು ಪರಿಸರ ನಾಶವಾಗುತ್ತೆ ಅನ್ನೋ ಕೂಗು ಗಟ್ಟಿಯಾದಾಗ ಸರ್ಕಾರ ಈ ಯೋಜನೆಯನ್ನ ಕೈಬಿಟ್ಟಿತ್ತು.ಈಗ ಸದ್ದಿಲ್ಲದೇ 50ಕ್ಕೂ ಹೆಚ್ಚು ಜಾತಿಯ ಮರಗಳನ್ನು ಯಾರ ಅನುಮತಿಗೂ ಕಾಯದೆ ಕಡಿಯಬಹುದು ಅಂತಾ ಮರಗಳ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು ಆದೇಶ ಹೊರಡಿಸಲು ಸಜ್ಜಾಗಿದೆ. ಅಲ್ಲದೇ ಇದಕ್ಕಾಗಿ ಮಸೂದೆಯನ್ನು ಮಂಡಿಸಲಾಗಿದೆ. ಹಳ್ಳಿಯ ರೈತರ ಹಿತದೃಷ್ಟಿಯಿಂದ ಈ ಕಾಯ್ದೆ ಅಂತಾ ಅರಣ್ಯ ಸಚಿವ ರಮಾನಾಥ್ ರೈ ಮರ ಕಡಿಯಲು ಅಸ್ತ್ರ ಹಿಡಿದಿದ್ದಾರೆ. ಸರ್ಕಾರ ಗುಲ್‍ಮೋಹರ್, ಆಫ್ರಿಕನ್ ಟ್ಯೂಲಿಪ್, ಲಕ್ಷ್ಮಿತರು ಮರ, ನುಗ್ಗೇಕಾಯಿ ಮರ, ಬಾಗೇಮರ ಸೇರಿದಂತೆ ಐವತ್ತಕ್ಕೂ ಹೆಚ್ಚು ಜಾತಿಯ ಮರಗಳ ಹೆಸರನ್ನು ಲಿಸ್ಟ್ ಮಾಡಿಕೊಂಡಿದೆ.ಈ ಸಂಬಂಧ ರಮಾನಾಥ್ ರೈ ವಿರುದ್ಧ ಪರಿಸರ ಪ್ರೇಮಿಗಳು ಸಿಡಿದೆದ್ದಿದ್ದಾರೆ. ಈ ಕಾಯ್ದೆ ಜಾರಿಯಾದ್ರೆ ದೊಡ್ಡ ಹೋರಾಟವಾಗಲಿದೆ. ನಿಮ್ಮ ಸಚಿವರಿಗೆ ಬುದ್ಧಿ ಹೇಳಿ ಅಂತಾ ಪರಿಸರ ಪ್ರೇಮಿ ನಿಶಾಂತ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.ಸರ್ಕಾರ ಟಿಂಬರ್ ಮಾಫಿಯಾಗೆ ಕುಮ್ಮಕ್ಕು ಕೊಡೋಕೆ ಈ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ ಅನ್ನೋ ಅನುಮಾನ ಮೂಡಿದೆ.Sign in to your account
Username or Email Address


Password

 Remember Me


