ಉಡುಪಿ: ರಾಹುಲ್ ಗಾಂಧಿ ಒಬ್ಬ ಬಚ್ಚಾ. ಆತನನ್ನು ಹಿಡ್ಕೊಂಡು ಮಠ, ದೇವಸ್ಥಾನ ಹೋಗ್ತೀರಾ? ನೀವು ಏನೇ ಮಾಡಿದ್ರೂ ಈ ಬಾರಿ ಗೆಲ್ಲಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗುಡುಗಿದ್ದಾರೆ.ನಗರದಲ್ಲಿ ನಡೆದ ಸಾಮಾಜಿಕ ಜಾಲತಾಣಿಗರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ ಇಲ್ಲೇ ಕ್ಯಾಂಪ್ ಮಾಡಲಿ. ಮಠ ದೇವಸ್ಥಾನದ ಓಟ ಮಾಡಲಿ. ಏನು ಮಾಡಿದ್ರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಕನಸು ಎಂದರು. ಇದನ್ನೂ ಓದಿ: ಉಡುಪಿಯಲ್ಲಿ ಚುನಾವಣಾ ಚಾಣಕ್ಯನ ರಣತಂತ್ರ- ಸ್ವಾಮೀಜಿಗಳ ಜೊತೆ ಶಾ ಗೌಪ್ಯ ಮಾತುಕತೆನಾವು ಈ ಬಾರಿ 150 ಸೀಟು ಗೆಲ್ಲುತ್ತೇವೆ. ಹಿಂದೂಗಳ ವಿರೋಧಿ ಸರ್ಕಾರಕ್ಕೆ ಜನ ಬುದ್ಧಿ ಕಲಿಸುತ್ತಾರೆ. ಸೊಕ್ಕಿನ ಧಿಮಾಕಿನ ಆಡಳಿತ ಎರಡು ತಿಂಗಳು ಮಾತ್ರ. ಕಾಂಗ್ರೆಸ್ ಮನೆಗೆ ಹೋಗುವ ಕಾಲ ಬಂದಿದೆ. ಕೊನೆಯ ದಿನಗಳನ್ನು ಕಾಂಗ್ರೆಸ್ ಎಣಿಸುತ್ತಿದೆ. ರಾಜ್ಯದಲ್ಲಿ ಗೂಂಡಾ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ರೌಡಿಗಳು, ಗೂಂಡಾಗಳು ಓಡಾಡ್ತಾರೆ ಎಂದರು. ಇದನ್ನೂ ಓದಿ: ಚರ್ಚೆ ನಡೆಯಲೆಂದೇ ತಪ್ಪಾಗಿ ವಿದ್ವತ್ ಹೆಸರನ್ನು ಹೇಳಿದ್ದೇನೆ: ಸ್ಪಷ್ಟನೆಯೊಂದಿಗೆ ಸಿಎಂಗೆ ಶಾ ಟಾಂಗ್ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ವಿರುದ್ಧ ಬಿಎಸ್ ವೈ ಆಕ್ರೋಶ ವ್ಯಕ್ತಪಡಸಿದ್ರು. ವಿದ್ವತ್ ಮತ್ತು ಮಾಧ್ಯಮದ ಮೇಲಿನ ಹಲ್ಲೆ ವಿರುದ್ಧ ಕಿಡಿ ಕಾರಿದರು. ಇನ್ನೊಬ್ಬ ಕಾಂಗ್ರೆಸ್ ಶಾಸಕ ಭೈರತಿ ಆಪ್ತ ನಾರಾಯಣ ಸ್ವಾಮಿ ಬಿಬಿಎಂ ಪಿ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚೋದಕ್ಕೆ ಮುಂದಾಗಿದ್ದ. ಇಂತವರನ್ನು ಇಟ್ಕೊಂಡು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದ್ದಾರೆ. ಇಂತವರಿಗೆ ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಂಚೆ ಶಲ್ಯ ತೊಟ್ಟು ಶ್ರೀಕೃಷ್ಣನ ದರ್ಶನ ಮಾಡಿದ ಅಮಿತ್ ಶಾSign in to your account
Username or Email Address


Password

 Remember Me


