ಬೆಂಗಳೂರು: ಹುಟ್ಟುಹಬ್ಬ, ಪ್ರೇಮಿಗಳ ದಿನ, ಹೊಸ ವರ್ಷ, ಪಾರ್ಟಿ.. ಹೀಗೆ ಎಲ್ಲ ಸಂತೋಷದಲ್ಲೂ ನಾವು ಮೊದಲು ಖರೀದಿಸೋದು ಚಾಕ್ಲೇಟ್. ಆದ್ರೇ ನಗರದ ಪ್ರತಿಷ್ಠಿತ ಅಂಗಡಿಯಲ್ಲಿ ಸಿಗೋ ಚಾಕ್ಲೇಟ್ ಗಳನ್ನ ನೀವು ತಿಂದ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು ಗ್ಯಾರಂಟಿ.ಪ್ರತಿಷ್ಠಿತ ಅಂಗಡಿಗಳಿಗೆ ಹೋಗಿ ಸೊಗಸಾಗಿ ಪ್ಯಾಕ್ ಆಗಿರೋ ಚಾಕ್ಲೇಟ್ ಗಳನ್ನು ಖರೀದಿಸಿ ಮಕ್ಕಳಿಗೆ ಕೊಡುವ ಮುನ್ನ ಪರೀಕ್ಷಿಸಿಕೊಳ್ಳಿ. ಯಾಕಂದ್ರೆ ಸಿಹಿ ಜೊತೆ ಇಲ್ಲಿ ಹುಳುಗಳೂ ಫ್ರೀಯಾಗಿ ಸಿಕ್ತಾವೆ. ಈ ಬಗ್ಗೆ ಯಾರಾದ್ರೂ ಬಂದು ಕೇಳಿದ್ರೆ ಅವರಿಗೆ ಬದಲಿ ಚಾಕ್ಲೇಟ್ ಕೊಟ್ಟು ಕಳಿಸಿ ಕೈ ತೊಳೆದುಕೊಳ್ತಾರೆ. ಬಿಟಿಎಂ ಲೇಔಟ್‍ನಲ್ಲಿರೋ `ಮೋರ್ ದೆನ್’ ಚಾಕ್ಲೇಟ್ ಹಾಗೂ ಕೇಕ್ ಶಾಪ್ ನಲ್ಲಿ ಹುಳುವಿರೋ ಚಾಕ್ಲೇಟ್ ಗಿಫ್ಟ್ ಆಗಿ ಸಿಕ್ಕಿದೆ. ಎಕ್ಸ್ಪೈರ್ ಡೇಟ್ ಸಹ ಅಳಿಸಿ ಚಾಕ್ಲೇಟ್ ಮಾರಾಟ ಮಾಡಲಾಗಿತ್ತು.ಈ ಬಗ್ಗೆ ಅಂಗಡಿಯವರನ್ನ ಕೇಳಿದ್ರೆ ಬದಲಿ ಚಾಕ್ಲೇಟ್ ಕೊಟ್ಟು ಸಾಗಹಾಕೋಕೆ ಮುಂದಾದ್ರು. ಹಣ ಪಡೆದು ಅವಧಿ ಮುಗಿದಿರೋ ಹುಳುಗಳಿರೋ ಚಾಕ್ಲೇಟ್ ಮಾರಾಟ ಮಾಡಿದ ವ್ಯಾಪಾರಿ ವಿರುದ್ಧ ಗ್ರಾಹಕಿ ವೇದ ಗ್ರಾಹಕರ ಕೋರ್ಟ್ ಮೆಟ್ಟಿಲೇರೋ ತಯಾರಿ ನಡೆಸಿದ್ದಾರೆ.Sign in to your account
Username or Email Address


Password

 Remember Me


