ಬೆಳಗಾವಿ: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ ಮೃತಪಟ್ಟು ಅನೇಕ ತಿಂಗಳುಗಳು ಕಳೆದಿವೆ. ಆದರೆ ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ ಮಾತ್ರ ಇನ್ನೂ ನಿಂತಿಲ್ಲ.ಆಸ್ತಿಗಾಗಿ ತೆಲಗಿ ಸಹೋದರರು ಜಗಳವಾಡಿದ್ದು, ತೆಲಗಿ ಪತ್ನಿ ಶಹೀದಾ ಹಾಗೂ ಮಗಳು ಸನಾ ಮೇಲೆ ಹಲ್ಲೆ ನಡೆಸಿದ್ದಾರೆ. ಶಹೀದಾ ಈಗಾಗಲೇ ಪತಿಯ ಛಾಪಾಕಾಗದ ವ್ಯವಹಾರದಿಂದ ಬಂದ ಹಣವನ್ನು ಕೋರ್ಟ್ ಗೆ ಒಪ್ಪಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪುಣೆ ಕೋರ್ಟ್ ಗೆ ಅರ್ಜಿವೊಂದನ್ನು ಸಹ ಸಲ್ಲಿಸಿದ್ದಾರೆ. ಇದನ್ನೂ ಓದಿ: 100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿಇದು ತೆಲಗಿ ಸಹೋದರ ಅಜೀಂ, ರಹಿಂ ಹಾಗೂ ಅವರ ಮಕ್ಕಳ ಕೆಂಗಣ್ಣಿಗೆ ಗುರಿಯಾಗಿದೆ. ಭಾನುವಾರ ಸಂಜೆ ಈ ವಿಚಾರ ಸಂಬಂಧ ಮನೆಯಲ್ಲಿ ಗಲಾಟೆ ನಡೆದಿದೆ. ಅಜೀಂ, ರಹೀಂ ಹಾಗೂ ಆತನ ಮಕ್ಕಳು ಗರ್ಭಿಣಿ ಸನಾಳ ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದಾರೆ. ಸದ್ಯ ಅವರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಇದನ್ನೂ ಓದಿ:   ನಕಲಿ ಛಾಪಾ ಕಾಗದ ಹಗರಣದ ಕಿಂಗ್ ಪಿನ್ ತೆಲಗಿ ನಿಧನಈ ಬಗ್ಗೆ ಸನಾ ಹಾಗೂ ಶಹೀದಾ ತೆಲಗಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


