ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಭಾಷೆಯ ಕುರಿತಂತೆ ನೀಡಿದ್ದ ಹೇಳಿಕೆ ಸುದ್ದಿಯಾಗುತ್ತಿದ್ದಂತೆಯೇ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಸ್ಪಷ್ಟನೆ ನೀಡಿದ್ದಾರೆ.ಭಾಷೆಯ ಕುರಿತು ಮಾತನಾಡಿದರ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನಿಡಿದ್ದಾರೆ. ಅಲ್ಲದೇ ಅದರ ಜೊತೆಗೆ ಒಂದು ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.ಫೇಸ್‍ಬುಕ್ ನಲ್ಲಿ ಬರೆದುಕೊಂಡಿರೋದೇನು?: ಮಾತೃ ಭಾಷೆಯ ಉಳಿವು ಪ್ರಶ್ನೆಯಲ್ಲ. ಬದಲಿಗೆ ಇಂದು ಅವು ಗಟ್ಟಿಯಾಗಿ ಇನ್ನು ಹಲವಾರು ತಲೆಮಾರಿಗೆ ಶ್ರೀಮಂತವಾಗಿ ಧಾರೆಯೆರೆಯುವ ಒಂದು ಸುವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಿದೆ. ಇಂದು ಬಹುತೇಕ ಭಾಷೆಯ ಬಗ್ಗೆ ಹೋರಾಟ ಕೇವಲ ವೈಯಕ್ತಿಕ ಮತ್ತು ರಾಜಕೀಯ ಕೀಳು ದೊಂಬರಾಟವಾಗಿ ಮಾರ್ಪಟ್ಟಾಗಿರುವುದು ಪ್ರಸ್ತುತ ನಮ್ಮ ಸಮಾಜದ ಒಂದು ದೊಡ್ಡ ದುರಂತ. ಆಂಗ್ಲ ಮಾಧ್ಯಮದ ಪ್ರಭಾವ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆ. ಶುದ್ಧವಾಗಿ ಕನ್ನಡ ಭಾಷೆ ಮಾತನಾಡುವುದು ಸಹ ಇಂದು ಒಂದು ಅಪರೂಪದ ಕಲೆಯಾಗಿ ನೋಡಲಾಗುತ್ತಿದೆ ಮತ್ತು ಇಂದಿನ ತಲೆಮಾರಿನ ಹಲವರಿಗೆ ಶುದ್ಧ ಕನ್ನಡ ಅರ್ಥವಾಗದಿರುವ ಭಾಷೆಯು ಹೌದು. ಕನ್ನಡ ಸಂಭಾಷಣೆಯಲ್ಲಿ ಆಂಗ್ಲ ಮತ್ತು ಇನ್ನಿತರ ಭಾಷೆಯ ಕಲಸು ಮಿಶ್ರಿತ ಮಾಡದಿದ್ದರೆ ಸಂವಹನ ಪೂರ್ಣಗೊಳ್ಳುವುದಿಲ್ಲ ಮತ್ತು ಅದು ಒಂದು sಣಚಿಣus ನಿರ್ಮಾಣ ಮಾಡುವುದಿಲ್ಲವೆನ್ನುವುದು ಸಹ ಇಂದಿನ ಹದೆಗೆಟ್ಟ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದು ಹೆಚ್ಚಾಗಿ ಬೆಂಗಳೂರು ನಗರದಲ್ಲಿ ಕಂಡು ಬರುತ್ತಿದ್ದ ಒಂದು ನಕಾರಾತ್ಮಕ ಬೆಳವಣಿಗೆ. ಇಂದು ಬೇರೆ ಗ್ರಾಮಾಂತರ ಹಳ್ಳಿ- ಪಟ್ಟಣಗಳಿಗೆ ಸಹ ದಟ್ಟವಾಗಿ ವ್ಯಾಪಿಸುತ್ತಿದೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ತಿರುಗಿ ಬಿದ್ದ ಶಾಸಕ ಸುರೇಶ್ ಕುಮಾರ್ಭಾಷೆಯ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಮೆರೆಯಬೇಕಾದವರು ಇಂದು ಅದನ್ನು ಕಡೆಗಣಿಸುತ್ತಿದ್ದೇವೆ. ಇಂದು ಹಲವಾರು ಭಾರತೀಯರ ಮನೆಮಾತು ಆಂಗ್ಲ ಭಾಷೆಯಾಗಿ ಬದಲಾಗಿದೆ. ಹಾಗಾದರೆ ನಮ್ಮ ಎಲ್ಲ ಭಾರತೀಯ ಭಾಷೆಗಳು ನಮ್ಮ ಇಂದಿನ ಸ್ಥಿತಿ-ಗತಿಗೆ ಸಮರ್ಥವಲ್ಲವೇ? ನಮ್ಮ ಕನ್ನಡದಷ್ಟು ವೈವಿಧ್ಯ ಚೆಲುವನ್ನು ಇನ್ನೆಲ್ಲಿ ಕಾಣಲು ಸಾಧ್ಯ? ನಗರಗಳಲ್ಲಿ ಇಂದು ಅಂತರರಾಷ್ಟ್ರೀಯ ಶಾಲೆಗಳಲ್ಲಿ ನಮ್ಮ ಮಾತೃ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಐರೋಪ್ಯ ಭಾಷೆಗಳ ಹೇರಿಕೆ ನಡೆಯುತ್ತಿದೆ. ಈ ಭಾಷೆಗಳು ಇಂದು ಯುರೋಪ್ ಖಂಡದ ಆಯಾ-ಪ್ರದೇಶ ದೇಶಗಳಲ್ಲೇ ಅವನತಿಯತ್ತ ಸಾಗುತ್ತಿದೆ. ಮೂಲ ಜನಸಂಖ್ಯೆ ಕುಸಿತ, ವಲಸೆ ಭಾಷೆಯ ಬೆಳೆಯುತ್ತಿರುವ ಪ್ರಭಾವ, ಬದಲಾಗುತ್ತಿರುವ ಜನಸಂಖ್ಯೆ ಪರಿವರ್ತನೆ, ಇಂದು ಈ ಖಂಡದ ಪ್ರಮುಖ ಸವಾಲಾಗಿದೆ. ಆದರೆ ನಾವು ಇಂದು, ಅರ್ಥವಾಗದ ಮತ್ತು ನಮ್ಮ ಪರಂಪರೆಗೆ ಯಾವುದೇ ಸಂಬಂಧವಿಲ್ಲದ ಈ ವಿದೇಶಿ ಭಾಷೆಗಳಿಗೆ ಮನ್ನಣೆ ನೀಡುತ್ತಿದ್ದೇವೆ. ಹಾಗೂ ನಮ್ಮ ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘಸ್ನಾನ ಮಾಡಿಸುತ್ತಿರುವುದು ಅವಮಾನದ ಲಕ್ಷಣವೆಂದೇ ಪರಿಗಣಿಸುತ್ತೇನೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ನಟ ಜಗ್ಗೇಶ್ ಟಾಂಗ್ಭಾಷೆ ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ. ಇಂದು ಕನ್ನಡಿಗರಿಗೆ ಸಿಗುತ್ತಿರುವ ಸ್ಥಾನ-ಮಾನ, ಮರ್ಯಾದೆ ಎಲ್ಲವೂ ನಮ್ಮ ಶ್ರೀಮಂತ ಪರಂಪರೆಯ ಬಳುವಳಿಯಿಂದ ಬಂದದ್ದು. ಅದನ್ನು ನಾವು ಹೆಮ್ಮೆಯಿಂದ ಬಳಸಿ, ಉಳಿಸಿ ಇನ್ನಷ್ಟು ಮೆರುಗುಗೊಳಿಸುವುದು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಶುದ್ಧ ಕನ್ನಡ ಬಳಕೆ ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡುವುದು ಹಾಗೂ ಸಂವಹನದಲ್ಲಿ ಹೆಚ್ಚಿನ ಆಲೋಚನೆಯ ನಿಖರತೆಯನ್ನು ತಲುಪಬಹುದಾಗಿದೆ.ವಿಡಿಯೋದಲ್ಲೇನಿದೆ?: ಇದಷ್ಟು ಹೇಳಲು ಕಾರಣ ನಮ್ಮ ಕೆಲವು ದೃಶ್ಯ ಮಾಧ್ಯಮದವರು ಭಾಷೆಗೆ ಸಂಬಂಧಿಸಿದಂತೆ ಪುತ್ತೂರಿನ ಕಾರ್ಯಕ್ರಮ ಒಂದರಲ್ಲಿ ನನ್ನ ಮಾತು ಮತ್ತು ಆಲೋಚನೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿರುವುದ್ದಕ್ಕೆ ಹೃದಯಪೂರ್ವಕ ಸ್ವಾಗತ. ಹೀಗೆ ಕಳೆದ 2 ದಶಕಕ್ಕೂ ಹೆಚ್ಚಿನ ನನ್ನ ರಾಜಕಾರಣದ ಜೀವನದ ಉದ್ದಕ್ಕೂ ಸದಾ ನನ್ನ ಬಗ್ಗೆ ವಿಷಕಾರುತ್ತಲೇ ನನ್ನನ್ನು ಅನಾವರಣಗೊಳಿಸಿದ ಈ ಕೆಲವು ಮಾಧ್ಯಮದ ಮಂದಿಗೆ ಈ ವಿಷಯವನ್ನು ಇನ್ನು ಹೆಚ್ಚಾಗಿ ನಿಮ್ಮ ಅಪ್ರಬುದ್ಧ ಭಾಷೆಯಲ್ಲೇ ಚರ್ಚೆ ಮುಂದುವರಿಸುವಂತೆ ಶುಭ ಕೋರುತ್ತೇನೆ. ಅನಂತ ಧನ್ಯವಾದಗಳು ಅಂತ ಹೇಳಿದ್ದಾರೆ.https://www.youtube.com/watch?v=tlNDCv9myi4&feature=youtu.behttps://www.youtube.com/watch?v=jE4xn6DpZhYhttps://www.youtube.com/watch?v=24frMpm0HGYSign in to your account
Username or Email Address


Password

 Remember Me


