ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಯುವಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಆರೋಪಿಗಳನ್ನ ಸಂಜೆಯೊಳಗೆ ಬಂಧಿಸುವುದಕ್ಕೆ ಹೇಳಿದ್ದೇನೆ. ಜೊತೆಗೆ ಇದ್ದ ಎಲ್ಲರನ್ನು ಬಂಧಿಸಲು ಕಮಿಷನರ್‍ಗೆ ಸೂಚಿಸಿದ್ದೇನೆ ಅಂತ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಶಾಸಕ ಹ್ಯಾರಿಸ್ ಬಳಿ ಕೂಡ ಮಾತನಾಡಿದ್ದೇನೆ. ಇಂತಹ ವರ್ತನೆ ಸರಿ ಅಲ್ಲ ಅಂತ ಹೇಳಿದ್ದೇನೆ. ಇದು ಕ್ಷಮಿಸಲಾಗದ ಅಪರಾಧವಾಗಿದೆ. ಯಾರ ಮಗ ಆದ್ರು ಅಷ್ಟೆ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ. ಶಾಸಕ ಹ್ಯಾರಿಸ್‍ಗೆ ಮಗನನ್ನು ಸರೆಂಡರ್ ಮಾಡಿಸೋಕೆ ಸೂಚಿಸುತ್ತೇನೆ. ಪೊಲೀಸ್ ಅಯಕ್ತರಿಗೆ ಜೊತೆ ಮಾತನಾಡಿದ್ದೆನೆ. ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಜೊತೆಗಿರುವ ಎಲ್ಲರನ್ನು ಬಂಧಿಸಿ ಎಂದು ಸೂಚಿಸಿದ್ದೇನೆ ಅಂದ್ರು.ನನಗೆ ಯಾರಿಂದಲು ಒತ್ತಡ ಇಲ್ಲ. ಗಾಯಾಳು ಕುಡಿದಿದ್ರಾ ಎಂಬ ಬಗ್ಗೆ ವರದಿ ಕೊಡಿ ಅಂತ ಒತ್ತಡ ಹೇರಿದ ಇನ್ಸ್ ಪೆಕ್ಟರ್ ಬಗ್ಗೆ ಸಹಾ ತನಿಖೆ ಮಾಡಿ ಮಾಹಿತಿ ಕೊಡಿ ಅಂತ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡ್ತೇನೆ. ಸಂಜೆ ಒಳಗಾಗಿ ಆರೋಪಿಯನ್ನ ಬಂಧಿಸಬೇಕು. ನಲ್‍ಪಾಡ್ ಅನ್ನ ಬಂಧಿಸದೇ ಹೊದ್ರೆ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳೇ ಹೊಣೆ ಅಂತ ಸ್ಪಷ್ಟಪಡಿಸಿದ್ದಾರೆ.ನಾನ್ ಸೆನ್ಸ್ ರಾಮಲಿಂಗಾರೆಡ್ಡಿ ಎಂದು ಸಂಸದ ಪ್ರಹ್ಹಾದ್ ಜೋಶಿ ಹೇಳಿಕೆ ವಿಚಾರದ ಕುರಿತು ಇದೇ ವೇಳೆ ಮಾತನಾಡಿದ ಸಚಿವರು, ಸಂಸದ ಪ್ರಹ್ಲಾದ್ ಜೋಶಿಯೇ ದೊಡ್ಡ ನಾನ್ ಸೆನ್ಸ್. ಅವರ ಅಣ್ಣ ಬ್ಯಾಂಕಿಗೆ ವಂಚನೆ ಮಾಡಿದವರು. ಬ್ಯಾಂಕಿಗೆ ವಂಚನೆ ಮಾಡಿದವರ ತಮ್ಮ ಜೋಶಿ ದೊಡ್ಡ ನಾನ್ ಸೆನ್ಸ್. ಆರೋಗ್ಯಕರವಾಗಿ ಮಾತನಾಡಿದ್ರೆ ಹಾಗೇ ಉತ್ತರ ಕೊಡ್ತೀನಿ. ಹೀಗೆ ಮಾತಾಡಿದ್ರೆ ಹೀಗೆ ಉತ್ತರ ಕೊಡ್ತೀನಿ ಅಂತ ಕಿಡಿಕಾರಿದ್ರು.ಕೇಂದ್ರ ಸಚಿವ ಅನಂತಕುಮಾರ್ ಕನ್ನಡ ಹಾಗೂ ವಿವಾದತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಸೈಬರ್ ಕ್ರೈಂ ಕೇಸ್ ದಾಖಲಿಸುವಂತೆ ಸೂಚನೆ ನೀಡುತ್ತೇನೆ. ಕನ್ನಡದ ಬಗ್ಗೆ ಮಾತನಾಡೊದು ಸರಿ ಇಲ್ಲ. 30 ಜಿಲ್ಲೆಗಳಲ್ಲಿ 3 ಜಿಲ್ಲೆ ಮಾತ್ರ ಕನ್ನಡದ ಪರನಾ? ಉಳಿದವರು ತಿರುಗಿ ಬಿದ್ರೆ ಏನ್ ಮಾಡ್ತಿರಾ? ಅನಂತ ಕುಮಾರ್ ಹೆಗ್ಡೆಗೆ ಉಳಿದ ಜಿಲ್ಲೆಯವರು ತಕ್ಕ ಉತ್ತರ ಕೊಡ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಫೇಸ್ ಬುಕ್‍ನಲ್ಲಿ ಬರೆದ ಸಿದ್ದರಾಮಯ್ಯ ತೆರಿಗೆ ಹಣದಲ್ಲಿ ಗಂಜಿ ಗಿರಾಕಿಗಳನ್ನು ಸಾಕುತ್ತಿದ್ದಾರೆ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಹಾಗಾದ್ರೆ ಇವರು ಮೋದಿ ಗಂಜಿ ಗಿರಾಕಿಗಳಾ? ನಮ್ಮ ತೆರಿಗೆ ಹಣದಲ್ಲಿ ಮೋದಿ ಇವರನ್ನೆಲ್ಲಾ ಸಾಕ್ತಿದ್ದಾರಾ…? ಮೋದಿಯ ಗಂಜಿ ಗಿರಾಕಿಗಳು ಬಿಜೆಪಿಗರು. ಕೇಂದ್ರ ಸರಕಾರದ ತೆರಿಗೆ ಹಣವನ್ನು ನೀವು ನೆಕ್ಕುತ್ತಿದ್ದೀರಾ….? ನೀವು ಹೇಗೆ ಹೇಳಿಕೆ ಕೊಡ್ತಿರೋ ನಾವೂ ಹಾಗೇ ಪ್ರತಿಕ್ರಿಯೆ ಕೊಡ್ತೀವಿ ಅಂದ್ರು.https://www.youtube.com/watch?v=fnMCip-Nisshttps://www.youtube.com/watch?v=l3Uawzj1C-0Sign in to your account
Username or Email Address


Password

 Remember Me


