ಮಂಡ್ಯ: ಕಬ್ಬು ತುಂಬಿದ ಎತ್ತಿನಗಾಡಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದು ಎತ್ತಿಗೆ ಕಾಲು ಮುರಿದಿದ್ದು, ಮತ್ತೊಂದು ಎತ್ತಿಗೆ ಗಾಯವಾಗಿರುವ ಘಟನೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗೇಟ್ ಬಳಿ ನಡೆದಿದೆ.ಇಂದು ಮುಂಜಾನೆ ಕೆಎಂ ದೊಡ್ಡಿ ಮದ್ದೂರು ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಎತ್ತಿನಗಾಡಿ ಕಬ್ಬು ತುಂಬಿಕೊಂಡು ಕೆ.ಎಂ ದೊಡ್ಡಿಯಲ್ಲಿದ್ದ ಸಕ್ಕರೆ ಕಾರ್ಖಾನೆಗೆ ಹೋಗುತ್ತಿತ್ತು. ಕಾರು ಚಾಲಕ ಮದ್ದೂರಿನಿಂದ ವೇಗವಾಗಿ ದೊಡ್ಡಿ ಕಡೆ ಹೋಗುತ್ತಿದ್ದನು. ಆದರೆ ಕಾರು ಚಾಲಕನ ನಿಯಂತ್ರಣ ತಪ್ಪಿ ಎತ್ತಿನಗಾಡಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಎತ್ತಿನಗಾಡಿ ಓಡಿಸುತ್ತಿದ್ದ ರೈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ಸಂಬಂಧ ಕೆ.ಎಂ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


