ಬೆಂಗಳೂರು: ತಡ ರಾತ್ರಿ ಟ್ರಾಫಿಕ್ ಪೊಲೀಸರು ಡ್ರಂಕ್ & ಡ್ರೈವ್ ತಪಾಸಣೆ ಮಾಡುವ ವೇಳೆ ಇಬ್ಬರು ವಿದೇಶಿಯರು ಸೇರಿ ಏಳು ಜನರ ಗುಂಪು ಪಾನ ಮತ್ತರಾಗಿ 1 ಗಂಟೆಗೂ ಹೆಚ್ಚುಕಾಲ ಇನ್ನಿಲ್ಲದೆ ಸಂಚಾರಿ ಪೊಲೀಸರನ್ನ ಕಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 2ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎಂ.ಜಿ ರಸ್ತೆಯಿಂದ ಪಾರ್ಟಿ ಮುಗಿಸಿ ಕುಡಿದು ತಮಿಳುನಾಡು ರಿಜಿಸ್ಟ್ರೇಷನ್ ನ ಟಾಟಾ ಸುಮೋದಲ್ಲಿ ಬಂದ ಏಳು ಜನರು ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಸಹಕರಿಸದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.ಸತತ ಒಂದು ಗಂಟೆಗಳ ಕಾಲ ನಾಲ್ವರು ಟ್ರಾಫಿಕ್ ಸಿಬ್ಬಂದಿಗಳನ್ನು ಕಾಡಿದ ಅವರು ಅವಾಂತರ ಸೃಷ್ಟಿಸಿದ್ದಾರೆ. ತಪಾಸಣೆ ವೇಳೆ ಚಾಲಕ ಸುಂದರೇಶನ್(35) ಮದ್ಯ ಸೇವಿಸಿರುವುದು ಸಾಬೀತಾಗಿದೆ. ಇನ್ನುಳಿದಂತೆ ಆರು ಜನರು ಕುಡಿದು ರಸ್ತೆಯಲ್ಲೆಲ್ಲಾ ತೂರಾಟ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಲು ನಾನಾ ಕಸರತ್ತು ನಡೆಸಿದರು.ಎಂ.ಜಿ.ರಸ್ತೆಯಿಂದ ಪಾರ್ಟಿ ಮಾಡಿ ಬಂದ ಇಬ್ಬರು ಇಟಲಿ ಮಹಿಳೆಯರು, ಮೂವರು ಗಂಡಸರು, ಒಬ್ಬ ತಮಿಳು ಯುವತಿ, ಮತ್ತೊಬ್ಬ ಮಲೆಯಾಳಿ ಯುವತಿ ಸೇರಿ 7 ಜನರ ಗುಂಪು ಪುಂಡಾಟ ನಡೆಸಿದೆ. ಇವರ ತರಲೆ ನಿಲ್ಲಿಸಲಾಗದೇ ಪರದಾಡಿದ ಪೊಲೀಸರು ತಪಾಸಣೆ ನಡೆಸುವಷ್ಟರಲ್ಲಿ ಸುಸ್ತಾಗಿದ್ದರು. ಕೊನೆಗೂ ಚಾಲಕನನ್ನ ತಪಾಸಣೆ ನಡೆಸಿ ಟಾಟಾ ಸುಮೋ ಸೀಜ್ ಮಾಡಿ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


