ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವು ಹೊಸ ಯೋಜನೆಗಳನ್ನ ಘೋಷಣೆ ಮಾಡಲಾಗಿದೆ. ಇಲಾಖೆಗೆ ಒಟ್ಟಾರೆ 1,949 ಕೋಟಿ ರೂ.ಗಳನ್ನು ಒದಗಿಸಲಾಗಿದೆ.2018-19ನೇ ಸಾಲಿನ ಹೊಸ ಯೋಜನೆಗಳು:
* ಸರ್ಕಾರ ನದಿಗಳನ್ನು ಸಂರಕ್ಷಿಸಲು ಉದ್ದೇಶಿಸಿದ್ದು, ನದಿಗಳ ಜಲಾನಯನ ಪ್ರದೇಶವನ್ನು ಜಲಾನಯನ ತತ್ವದ ಆಧಾರದನ್ವಯ ಉಪಚರಿಸಿ ನದಿಗಳ ಇಕ್ಕೆಲಗಳಲ್ಲಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಇಲಾಖೆಗಳ, ಸರ್ಕಾರೇತರ ಸಂಘ-ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಬೃಹತ್ ಪ್ರಮಾಣದ ಗಿಡ ನೆಡುವ ಕಾರ್ಯಕ್ರಮ.
* ಇದರಿಂದ ನದಿಗಳ ನೀರಿನ ಸೆಲೆ ಮತ್ತು ನೀರಿನ ಒಳಹರಿವು ಹೆಚ್ಚಳ. 10 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಯಕ್ರಮ.
* ರೈತರು ಬೆಳೆದ ಮರಗಳ ಮಾರಾಟದಲ್ಲಿನ ಅಡಚಣೆಗಳನ್ನು ನಿವಾರಿಸಿ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಲು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಸಣ್ಣ ಮರ ಸಂಗ್ರಹಾಲಯಗಳ ಸ್ಥಾಪನೆ. * ರೈತರು ಬೆಳೆದ ಮರಗಳನ್ನು ಡಿಪೋಗಳಲ್ಲಿ ಅರಣ್ಯ ಇಲಾಖೆ ಮತ್ತು ಎ.ಪಿ.ಎಂ.ಸಿ.ಯ ಸಮನ್ವಯದೊಂದಿಗೆ ಬಹಿರಂಗ ಹರಾಜಿನಲ್ಲಿ ಮಾರಾಟ- 5 ಕೋಟಿ ರೂ. ಅನುದಾನ.
* ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಪ್ರಸ್ತುತ ನೀಡುತ್ತಿರುವ 5 ಲಕ್ಷ ರೂ. ಎಕ್ಸಗ್ರೇಷಿಯಾ ಜೊತೆಗೆ ಮೃತರ ಕುಟುಂಬಕ್ಕೆ 5 ವರ್ಷಗಳವರೆಗೆ 2 ಸಾವಿರ ರೂ.ಗಳ ಮಾಸಾಶನ.
* ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ನಿಧಿಯ ಅನುದಾನದಡಿಯಲ್ಲಿ 96 ಕೋಟಿ ರೂ.ಗಳ ವೆಚ್ಚದಲ್ಲಿ 42 ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರಗಳ(Continuous Air Quality Monitoring Stations) ಸ್ಥಾಪನೆ.Sign in to your account
Username or Email Address


Password

 Remember Me


