ಬೆಂಗಳೂರು: ಬುರ್ಖಾ ಧರಿಸಿ ಕಳ್ಳತನ ಮಾಡುತ್ತಿದ್ದ 6 ಚಾಲಾಕಿ ಕಳ್ಳಿಯರನ್ನು ಬಂಧಿಸುವಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.ಬೆಂಗಳೂರು ಹೊರವಲಯದ ರಿಂಗ್ ರಸ್ತೆಗಳಲ್ಲಿ ಭಿಕ್ಷಾಟನೆಗೆ ಇಳಿದು ಈ ಬುರ್ಖಾಧಾರಿ ಗ್ಯಾಂಗ್ ಮನೆಗಳ್ಳತನ ಹಾಗೂ ದರೋಡೆ ಮಡುತ್ತಿತ್ತು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಮದುವೆ ಆಮಂತ್ರಣ ಪತ್ರಿಕೆ, ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು ಅಂತ ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡುವ ನೆಪದಲ್ಲಿ ಕಳ್ಳತನ ಹಾಗೂ ರಾಬರಿ ಮಾಡುತ್ತಿದ್ದರು.ಈ ಬಗ್ಗೆ ಮಾಹಿತಿ ಪಡೆದ ಮಾರತ್ತಹಳ್ಳಿ ಪೊಲೀಸರು ಈ ದಂಧೆಯಲ್ಲಿ ತೊಡಗಿದ್ದ 6  ಬುರ್ಖಾಧಾರಿ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಗ್ಯಾಂಗ್ ನ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.Sign in to your account
Username or Email Address


Password

 Remember Me


