ಬೆಂಗಳೂರು: ಫೆಬ್ರವರಿ 14 ಎಲ್ಲಾ ಜೋಡಿಗಳು ಪ್ರೇಮಿಗಳ ದಿನವನ್ನು ಆಚರಿಸಿದ್ದು, ಅವರಿಗೆ ಇಷ್ಟವಾದ ಉಡುಗೊರೆಯನ್ನು ನೀಡಿದ್ದಾರೆ. ಅದೇ ರೀತಿ ಕನ್ನಡ ಸಿನಿಮಾರಂಗದ ಹ್ಯಾಂಡ್ ಸಮ್ ಜೋಡಿ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಕೂಡ ಪ್ರೇಮಿಗಳ ದಿನಾಚರಣೆಯನ್ನ ಆಚರಿಸಿದ್ದಾರೆ.ಸುದೀಪ್ ಸದಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಫ್ಯಾಮಿಲಿಗಾಗಿ ಸಮಯ ಕೊಡುತ್ತಿದ್ದಾರೆ. ಅಭಿನಯ, ಗಾಯನ, ನಿರ್ಮಾಣ, ನಿರೂಪಣೆ ಇದರ ಮಧ್ಯೆ ಕ್ರೀಡೆ ಹೀಗೆ ಹತ್ತು ಹಲವಾರು ಕಡೆಗಳಲ್ಲಿ ತೊಡಗಿಕೊಂಡಿರುವ ಕಿಚ್ಚನಿಗಾಗಿ ಪತ್ನಿ ಪ್ರಿಯಾ ಅವರು ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.ಸುದೀಪ್- ಪ್ರಿಯಾ ಅವರದ್ದು ಲವ್ ಮ್ಯಾರೆಜ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಮದುವೆ ಆಗಿ ಸಾಕಷ್ಟು ವರ್ಷಗಳು ಕಳೆದ ನಂತರ ಕಿಚ್ಚ ಹಾಗೂ ಪ್ರಿಯಾ ಮತ್ತೆ ಪ್ರೇಮಿಗಳ ದಿನಾಚರಣೆಯನ್ನ ಆಚರಣೆ ಮಾಡಿದ್ದಾರೆ. ಪ್ರಿಯಾ ಅವರು ಮನಸ್ಸಿಗೆ ಹತ್ತಿರವಾಗುವ ಉಡುಗೊರೆಯನ್ನು ಪ್ರೇಮಿಗಳ ದಿನಾಚರಣೆಗಾಗಿ ಉಡುಗೊರೆಯನ್ನ ಪತಿಗೆ ನೀಡಿದ್ದಾರೆ. ಸುದೀಪ್ ಅವರು ಕಾಫಿ ಪ್ರಿಯರಾಗಿದ್ದು, ಅವರಿಗಾಗಿ ಎರಡು ಕಾಫಿ ಕಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.ರಾಜ-ರಾಣಿಯಂತಾದ ಜೋಡಿ ಪ್ರಿಯಾ ಸುದೀಪ್ ಅವರು ನೀಡಿರುವ ಉಡುಗೊರೆಯ ಮೇಲೆ ಪ್ರೀತಿಯಿಂದ ಸಂದೇಶವನ್ನ ಬರೆಯಲಾಗಿದೆ. ಎರಡು ಕಪ್ ಮೇಲೆ ಸುದೀಪ್ ಹಾಗೂ ಪ್ರಿಯಾ ಎಂದು ಬರೆದಿದ್ದು, ಮತ್ತೆರಡರಲ್ಲಿ `ಕ್ವೀನ್ ಆಫ್ ಎವರಿಥಿಂಗ್’, `ಕಿಂಗ್ ಆಫ್ ವಾಟ್ ಎವರ್ಸ್ ಲೆಫ್ಟ್’ ಎಂದು ಬರೆಯಲಾಗಿದೆ.ಸದ್ಯಕ್ಕೆ ಸುದೀಪ್ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಜೊತೆಗೆ ಪೈಲ್ವಾನ್ ಸಿನಿಮಾಗಾಗಿ ಜಿಮ್‍ಗೆ ಹೋಗಿ ವರ್ಕ್ ಔಟ್ ಮಾಡುತ್ತಿದ್ದಾರೆ. ಇದನ್ನು ಓದಿ: ತನ್ನ ವ್ಯಾಲಂಟೈನ್ ಯಾರು ಎಂಬುದನ್ನು ಹೇಳಿದ ವಿಶ್ವಸುಂದರಿ ಮಾನುಷಿ ಚಿಲ್ಲರ್!The only thing better than ONE cup of coffee……is TWO!These are OURS!???????????? @KicchaSudeep pic.twitter.com/70vlnSWpKG— Priya Sudeep/ಪ್ರಿಯ (@iampriya06) February 14, 2018Sign in to your account
Username or Email Address


Password

 Remember Me


