ಉಡುಪಿ: ರಾಜ್ಯ ಸರ್ಕಾರದ ಬಹುಮನಿ ಸುಲ್ತಾನ್ ಜಯಂತಿ ಬಗ್ಗೆ ರಾಜ್ಯಾದ್ಯಂತ ಹೋರಾಟ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ಮತ್ತು ಬಿಜೆಪಿ ಇದನ್ನು ವಿರೋಧಿಸಿದೆ. ಈ ನಡುವೆ ಬಹುಮನಿ ಸುಲ್ತಾನ್ ಯಾರು? ಬಹುಮನಿ ಸುಲ್ತಾನ್ ಬಗ್ಗೆ ನನಗೆ ಗೊತ್ತಿಲ್ಲ ಅಂತ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ರಾಜ್ಯ ಸರ್ಕಾರದ ಈ ಆಚರಣೆ ಬಗ್ಗೆ ಪಕ್ಷದೊಳಗೆ ಅಸಮಾಧಾನ ಇದೆಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ.ಉಡುಪಿಯ ಬ್ರಹ್ಮಾವರ ತಾಲೂಕು ಉದ್ಘಾಟಿಸಿ ಮಾತನಾಡಿದ ಕಾಗೋಡು, ಆ ಕಾಲದಲ್ಲಿ ನಾನು, ನೀವು ಯಾರು ಹುಟ್ಟಿರಲಿಲ್ಲ. ಯಾವನು ಏನು ಚರಿತ್ರೆ ಬರೆದನೋ ಗೊತ್ತಿಲ್ಲ. ಚರಿತ್ರೆ ಬರೆದವ ಅವನ ಆಲೋಚನೆ ಮತ್ತು ಮಾನಸಿಕ ಸ್ಥಿತಿಗೆ ಅನುಗುಣವಾಗಿ ಚರಿತ್ರೆ ಬರೆದಿರುತ್ತಾನೆ ಎಂದು ಹೇಳಿದರು.ಆಯಾಯ ಕಾಲದಲ್ಲಿ ಏನೇನು ಆಗಿದೆ ಅದು ಸರಿ. ರಾಜ ಮಹಾರಾಜರು ಸಾಮ್ರಾಜ್ಯ ವಿಸ್ತರಣೆ ಮಾಡುತ್ತಾ ಬಂದವರು. ಆಗ ಆಳ್ವಿಕೆ ಮಾಡಿದ ರಾಜರಿಗೆ ಜನರ ಬಗ್ಗೆ ಕಾಳಜಿ ಇರುತ್ತಿರಲಿಲ್ಲ. ಸಾಮ್ರಾಜ್ಯ ವಿಸ್ತರಣೆ ಮಾತ್ರ ಆಗಿನ ರಾಜರ ಗುರಿಯಾಗಿತ್ತು. ಜನರಿಗೆ ಸ್ವಂತದ್ದೊಂದು ಭೂಮಿ ಕೊಡುವ ಕೆಲಸವನ್ನೂ ಆಗಿನ ರಾಜ ಮಹಾರಾಜರು ಮಾಡಿಲ್ಲ ಎಂದು ಕಾಗೋಡು ಟೀಕೆ ಮಾಡಿದರು.ಕುವೆಂಪು ಅವರು ಬರೆದ ಹಾಡು ನಾಡಗೀತೆ ಆಯ್ತು. ಆ ಸಂದರ್ಭ ವಿರೋಧ ಬಂದಿದ್ದರೆ ಅದೂ ಆಗ್ತಾ ಇರಲಿಲ್ಲವೇನೋ ಅಂತ ಕಾಗೋಡು ತಿಮ್ಮಪ್ಪ ಹೇಳಿದ್ರು.Sign in to your account
Username or Email Address


Password

 Remember Me


