ಬೆಂಗಳೂರು: ಬಿಗ್ ಬಾಸ್ ಸೀಸನ್ 4ನ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಳಿ ಉಡುಗೊರೆಯೊಂದನ್ನು ಕೇಳಿದ್ದರು. ಕೊನೆಗೂ ನಟ ಪುನೀತ್ ಅವರು ಕೇಳಿದ ಉಡುಗೊರೆಯನ್ನೇ ನೀಡಿದ್ದಾರೆ.ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಟ ಪುನೀತ್ ನಡೆಸಿಕೊಡುತ್ತಿರುವ `ಫ್ಯಾಮಿಲಿ ಪವರ್’ ಶೋನಲ್ಲಿ ಪ್ರಥಮ್ ಮತ್ತು ಕುಟುಂಬ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಮುಗಿದ ಮೇಲೆ ಸುದೀಪ್ ಕೊಟ್ಟ ಎರಡು ಸಾವಿರ ರೂಪಾಯಿ ಹಾಗೂ ಐನೂರು ರೂಪಾಯಿ ನೋಟ್ ನ ಭದ್ರವಾಗಿ ಇಟ್ಟುಕೊಂಡಿದ್ದೇನೆ. ಇವತ್ತು ಇಲ್ಲಿ ನಿಮ್ಮ ಜೊತೆ ಸ್ಟೇಜ್ ಗೆ ಬಂದಿದ್ದು ಬಹಳ ಖುಷಿ ಆಗಿದೆ. ಶೋ ಮುಗಿದ ಮೇಲೆ ಈ ಬ್ಲೇಸರ್ ನನಗೆ ಕೊಡಿ, ಮದುವೆಗೋ, ಹನಿಮೂನ್ ವೇಳೆ ಧರಿಸುತ್ತೇನೆ ಎಂದು ಪ್ರಥಮ್ ಕೇಳಿದ್ದರು.ಪ್ರಥಮ್ ಕೇಳಿದ ತಕ್ಷಣ ಪುನೀತ್ ರಾಜ್ ಕುಮಾರ್ ಓಕೆ ಎಂದಿದ್ದರು. ನಂತರ ಕಾರ್ಯಕ್ರಮದ ಶೂಟಿಂಗ್ ಮುಗಿದ ಮೇಲೆ ಪುನೀತ್ ಕೊಟ್ಟ ಮಾತಿನಂತೆ ಪ್ರಥಮ್ ಗೆ ತಮ್ಮ ಬ್ಲೇಸರ್ ಕೊಟ್ಟಿದ್ದಾರೆ. ಪುನೀತ್ ಧರಿಸಿದ್ದ ಬ್ಲೇಸರ್ ಸಿಕ್ಕಿದ್ದಕ್ಕೆ ಪ್ರಥಮ್ ಕೂಡ ತುಂಬಾ ಖುಷಿಯಾಗಿದ್ದಾರೆ. ಪ್ರಥಮ್ ಕುಟುಂಬದವರ ಜೊತೆ ಸ್ಪರ್ಧಿಯಾಗಿ ಬಿಗ್ ಬಾಸ್ ಸ್ಪರ್ಧಿ ಸಮೀರಾಚಾರ್ಯ ಕುಟುಂಬವರು ಶೋನಲ್ಲಿ ಭಾಗವಹಿಸಿದ್ದರು. 






 Advertisement 




Sign in to your account
Username or Email Address


Password

 Remember Me


