ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನದಂದೇ, ಪ್ರೇಮಿಗಳ ಹಾಟ್ ಫೇವರೇಟ್ ಸ್ಪಾಟ್, ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಅಪಘಾತಕ್ಕೆ ಇಬ್ಬರು ಯುವಕರು ಬಲಿಯಾಗಿದ್ದಾರೆ.ನಂದಿಗಿರಿಧಾಮದ ಮಿರ್ಜಾ ಸರ್ಕಲ್ ಬಳಿ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮರಿಮಾಕಲಹಳ್ಳಿ ಗ್ರಾಮದ ಪ್ರಭಾಕರ್(22) ಹಾಗೂ ಮೋಹನ್ ಕುಮಾರ್(23) ಮೃತ ಯುವಕರು. ಪ್ರೇಮಿಗಳ ದಿನದ ಅಂಗವಾಗಿ ನಂದಿಗಿರಿಧಾಮಕ್ಕೆ ಬಂದು ವಾಪಾಸ್ಸಾಗುತ್ತಿದ್ದ ವೇಳೆ ಮಿರ್ಜಾ ಸರ್ಕಲ್ ತಿರುವಿನಲ್ಲಿ ಅತೀ ವೇಗದಿಂದ ಬೈಕ್ ಸವಾರ ಬಸ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















 Advertisement 




Sign in to your account
Username or Email Address


Password

 Remember Me


