ಬೆಂಗಳೂರು: ಇತ್ತೀಚೆಗೆ ಕೆಲವು ದಿನಗಳಿಂದ ಸ್ಯಾಂಡಲ್‍ವುಡ್ ನಟಿಯರು ಸಹ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ನಟಿ ದೀಪ್ತಿ ಕಾಪ್ಸೆ ಅವರಿಗೆ ಅಪರಿಚಿತ ಯುವಕನೋರ್ವ ವಾಟ್ಸಪ್ ನಲ್ಲಿ ಸೆಕ್ಸ್ ವರ್ಕರ್ಸ್ ಬೇಕೆಂದು ಮೆಸೇಜ್ ಹಾಕಿದ್ದಾನೆ.ಯುವಕನ ಮೇಸೇಜ್ ನೋಡಿದ ನಟಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ರಿಪ್ಲೈ ಮಾಡಿ, ನಿನ್ನ ಅಮ್ಮ ಅಥವಾ ತಂಗಿ ಬರಬಹುದು ಎಂದು ಖಡಕ್ಕಾಗಿ ದೀಪ್ತಿ ಕಾಪ್ಸೆ ಉತ್ತರಿಸಿದ್ದಾರೆ. ಈ ಬಗ್ಗೆ ದೀಪ್ತಿ ತಮ್ಮ ಫೇಸ್ ಬುಕ್ ಪೇಜಿನಲ್ಲಿ ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್ ತೆಗೆದು ಅಪ್ಲೋಡ್ ಮಾಡಿಕೊಂಡು ಆಕ್ರೋಶವನ್ನು ಹೊರಹಾಕಿದ್ದಾರೆ.ಹನಿ ಹನಿ ಇಬ್ಬನಿ, ಜ್ವಲಂತಂ, ಮಾಲ್ಗುಡಿ ಡೇಸ್, ಕಿರೀಟ ಮತ್ತು ಉಪೇಂದ್ರ ಮತ್ತೆ ಬಾ ಸಿನಿಮಾಗಳಲ್ಲಿ ದೀಪ್ತಿ ನಟಿಸಿದ್ದಾರೆ. ದೀಪ್ತಿ ಅವರು ತಮ್ಮ ಸಹಜ ನಟನೆ ಮೂಲಕ ವಿಮರ್ಶಕರ ಮೆಚ್ಚುಗೆಯನ್ನು ಸಹ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾದ ನಾಯಕಿ ಸನುಷಾ ಕನ್ಯಾಕುಮಾರಿಯಿಂದ ತಿರುವನಂತಪುರಗೆ ಮಾವೆಲಿ ಎಕ್ಸ್ ಪ್ರೆಸ್ ನಲ್ಲಿ ಬರುತ್ತಿದ್ದಾಗ ಅಪರಿಚಿತನೊಬ್ಬ ಕಿರುಕುಳ ನೀಡಿದ್ದನು. ಹೆಬ್ಬುಲಿ ನಾಯಕಿ ಅಮಲಾ ಪೌಲ್ ಮಲೇಶಿಯಾದಲ್ಲಿ ಡ್ಯಾನ್ಸ್ ಅಭ್ಯಾಸ ಮಾಡುವಾಗ ವ್ಯಕ್ತಿಯೊಬ್ಬ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ಈ ಬಗ್ಗೆ ಅಮಲಾ ಪೌಲ್ ವ್ಯಕ್ತಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
 Sign in to your account
Username or Email Address


Password

 Remember Me


