ಬೆಂಗಳೂರು: ನಾಡಿನ ಎಲ್ಲ ಭಕ್ತವೃಂದ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.ಶಿವರಾತ್ರಿಯಂದು ಈಶ್ವರನ ಧ್ಯಾನ ಮಾಡುತ್ತಾ, ಉಪವಾಸ, ಜಾಗರಣೆ ಮಾಡಿ ಶಿವನನ್ನು ಸ್ಮರಿಸುವ ಪ್ರಯುಕ್ತ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದಿವೆ. ಬೆಂಗಳೂರಿನ ಗಿರಿನಗರದಲ್ಲಿರುವ ವಾಸವೀ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ 8 ಅಡಿಯ ಶಿವನ ಲಿಂಗವನ್ನ ಪ್ರತಿಷ್ಠಾಪಿಸಲಾಗಿತ್ತು. ಈ ಲಿಂಗದ ವಿಶೇಷವೆನೆಂದೆರೆ ಇದನ್ನು ಸಣ್ಣ ಸಣ್ಣ 1008 ಲಿಂಗಗಳಿಂದ ಮಾಡಿದ್ದ ಶಿವನ ಲಿಂಗವಾಗಿದೆ. ಈ ವಿಶೇಷ ಲಿಂಗ ನೋಡಲು ತುಂಬಾ ಸುಂದರವಾಗಿ ಕಾಣುತ್ತಿತ್ತು. ಅಷ್ಟೇ ಅಲ್ಲದೇ  ದೇವಾಲಯದ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಮಂಗಳವಾರ ಸಂಜೆ 6 ಗಂಟೆಯಿಂದ ಇಂದು ಬೆಳಗ್ಗೆ 6 ಗಂಟೆಯವರೆಗೆ ಈಶ ಯೋಗಾ ಕೇಂದ್ರದಲ್ಲಿ ನಿರಂತರ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದವಾಗಿ ರುದ್ರಾಕ್ಷಿಯ ಮಣಿಗಳನ್ನು ನೀಡಲಾಯಿತು. ರಾತ್ರಿ ಬಾಲಿವುಡ್ ಗಾಯಕ ಸೋನು ನಿಗಮ್, ದಲೇರ್ ಮೆಹಂದಿ, ಸಿಯಾನ್ ರೋಲ್ಡನ್ ಮತ್ತು ತಂಡದವರು ಸಂಗಡಿಗರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.ಕಳೆದ ವರ್ಷ ಈಶ ಯೋಗಾ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 112 ಅಡಿ ಎತ್ತರದ ಬೃಹತ್ ಆದಿಯೋಗಿಯ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.Sign in to your account
Username or Email Address


Password

 Remember Me


