ಬೆಳಗಾವಿ: ಪ್ರಿಯಕರನೊಂದಿಗೆ ಗಂಡನ ಮನೆಯಲ್ಲಿಯೇ ಸಿಕ್ಕಿಬಿದ್ದ ಮಾಜಿ ಪ್ರೇಮಿಗಳಿಗೆ ಧರ್ಮದೇಟು ಬಿದ್ದ ಘಟನೆ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ನಡೆದಿದೆ.ಚಾಲಕಿ ಮಹಿಳೆ ತನ್ನ ಗಂಡ ಊರಲ್ಲಿ ಇಲ್ಲದ ಸುದ್ದಿಯನ್ನ ಪ್ರಿಯಕರನಿಗೆ ಫೋನ್ ಮೂಲಕ ತಿಳಿಸಿ ಮನೆಗೆ ಕರೆಸಿಕೊಂಡಿದ್ದಳು. ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ ಹಾಗೂ ಪ್ರಿಯಕರ ಇಬ್ಬರನ್ನೂ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ಐಗಳಿ ಪೋಲಿಸ್ ಠಾಣೆಗೆ ಗಂಡನ ಮನೆಯವರು ಕರೆದೊಯ್ದಿದ್ದಾರೆ.ಮದುವೆಗೆ ಮುಂಚೆಯೇ ಮಹಿಳೆ ಹಾಗು ಇಂಡಿ ತಾಲೂಕಿನ ಗೊಡ್ಯಾಳ ಗ್ರಾಮದ ವಿಠಲ ಸಂಗಪ್ಪ ಗೋಡೆ ನಡುವೆ ಪ್ರೇಮ ಸಂಬಂಧ ಇದ್ದು ಪ್ರೇಯಸಿಯ ಗಂಡನ ಮನೆಯಲ್ಲಿ ಯಾರೂ ಇಲ್ಲದಾಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.ಆರು ತಿಂಗಳ ಹಿಂದಷ್ಟೇ ಮಹಿಳೆ ಮದುವೆಯಾಗಿ ಗಂಡನ ಮನೆ ಇರುವ ಕೊಟ್ಟಲಗಿ ಗ್ರಾಮಕ್ಕೆ ಬಂದಿದ್ದಳು. ಈ ಘಟನೆ ರವಿವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂತರ ಎರಡು ಕುಟುಂಬಗಳ ಹಿರಿಯರು ಪೊಲೀಸ್ ಠಾಣೆಗೆ ಬಂದು ರಾಜಿ ಸಂಧಾನ ಮಾಡಿಕೊಂಡು ಹೋಗಿದ್ದಾರೆ.ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Sign in to your account
Username or Email Address


Password

 Remember Me


