ಮೈಸೂರು: ನಗರದ ಅರಮನೆ ಮೈದಾನದ ಆವರಣದಲ್ಲಿರುವ ನೀರಿನ ಹೊಂಡಕ್ಕೆ ಬಿದ್ದು, ಪರದಾಡುತ್ತಿದ್ದ ಶ್ವಾನವೊಂದನ್ನು ರಕ್ಷಿಸಲಾಗಿದೆ.ಪೊಲೀಸ್ ಇಲಾಖೆಯ ಶ್ವಾನದಳದ ಎಎಸ್‍ಐ ಶಿವಾಜಿ ರಾವ್ ಅವರು ಹೊಂಡದಲ್ಲಿ ಬಿದ್ದು ಸಿಲುಕಿದ್ದ ಶ್ವಾನವನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ನೀರು ಕುಡಿಯಲೆಂದು ಹೊಂಡಕ್ಕೆ ಇಳಿದಿದ್ದ ಶ್ವಾನ ಬಳಿಕ ಮೇಲೆ ಬರಲಾಗದೆ ಪರದಾಡುತ್ತಿತ್ತು. ಇದನ್ನ ಗಮನಿಸಿದ ಪೊಲೀಸ್ ಅಧಿಕಾರಿ ಸ್ಥಳಕ್ಕೆ ತೆರಳಿ ಶ್ವಾನವನ್ನು ಹೊಂಡದಿಂದ ಮೇಲಕ್ಕೆತ್ತಿದ್ದಾರೆ. ಹೊಂಡದಿಂದ ಪಾರಾದ ಶ್ವಾನ ಅಲ್ಲಿಂದ ಕಾಲ್ಕಿತ್ತಿದೆ.






 Advertisement 




Sign in to your account
Username or Email Address


Password

 Remember Me


