ಚಿಕ್ಕಮಗಳೂರು: ಅವಲಕ್ಕಿ ಗಂಟಲಲ್ಲಿ ಸಿಲುಕಿ ಮೂರು ವರ್ಷದ ಬಾಲಕನೋರ್ವ ಮೃತಪಟ್ಟ ಆಘಾತಕಾರಿ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಸಮೀಪದ ಶಿರಗುಂದದಲ್ಲಿ ನಡೆದಿದೆ.ದುರ್ಗಾಪ್ರಸಾದ್ ದಂಪತಿಯ ಪುತ್ರ ಅನೀಶ್ ಮೃತ ದುರ್ದೈವಿ ಬಾಲಕ. ಸೋಮವಾರ ತಿನ್ನುವಾಗ ಅನೀಶ್ ಗಂಟಲಲ್ಲಿ ಅವಲಕ್ಕಿ ಸಿಲುಕಿದ್ದು, ಕೂಡಲೇ ಪೋಷಕರು ಆತನನ್ನು ನಗರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!ಈ ವೇಳೆ ಅಲ್ಲಿನ ವೈದ್ಯರು ಉಸಿರುಗಟ್ಟಿದ್ದ ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಪೋಷಕರು ಅಲ್ಲಿಂದ ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅನೀಶ್ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ:ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವುಸದ್ಯ ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚೆಗಷ್ಟೇ ಇದೇ ಜಿಲ್ಲೆಯ ಸಂಜೀವಿನಿ ಶಾಲೆಯ ಶಿಕ್ಷಕಿಯೊಬ್ಬರು ಆಗಷ್ಟೇ ದೇವಸ್ಥಾನದಿಂದ ಪೂಜೆ ಮಾಡಿಸಿಕೊಂಡು ಬಂದ ತೆಂಗಿನ ಕಾಯಿ ಚೂರು ತಿಂದು ಅದು ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದರು. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!Sign in to your account
Username or Email Address


Password

 Remember Me


