ಬೆಂಗಳೂರು: ಬಹಳ ವರ್ಷಗಳಿಂದ ಸಿನಿರಂಗದಿಂದ ದೂರವಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಜೊತೆಗೆ ತಮ್ಮದೇ ಚಿತ್ರದಲ್ಲಿ ರಾಧಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.‘ಭೈರಾದೇವಿ’ ಅನ್ನುವ ಶೀರ್ಷಿಕೆಯಲ್ಲಿ ಚಿತ್ರ ಸೆಟ್ಟೇರಿದ್ದು ಇದೇ ತಿಂಗಳು 14ರಿಂದ ಚಿತ್ರೀಕರಣ ಶುರುವಾಗಲಿದೆ. ಸೋಮವಾರ ಬೆಂಗಳೂರಿನ ಬಂಡೆಕಾಳಮ್ಮ ದೇವಸ್ಥಾನದಲ್ಲಿ ಚಿತ್ರಕ್ಕೆ ಸರಳ ಮುಹೂರ್ತ ನೆರವೇರಿದೆ. ಭೈರಾದೇವಿ ಸಿನಿಮಾದಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಅಭಿನಯಿಸುತ್ತಿದ್ದು, ಅನುಪ್ರಭಾಕರ್ ರಮೇಶ್‍ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಸರಳವಾಗಿ ನಡೆದ ಮುಹೂರ್ತದಲ್ಲಿ ಚಿತ್ರತಂಡವಷ್ಟೇ ಭಾಗಿಯಾಗಿತ್ತು. ಈ ಚಿತ್ರವನ್ನ ಶ್ರೀಜಯ್ ನಿರ್ದೇಶನವಿದ್ದು ಬೆಂಗಳೂರು, ವಾರಣಾಸಿ, ಊಟಿ ಸೇರಿದಂತೆ ಹಲವು ರಮಣೀಯ ಸ್ಥಳಗಳಲ್ಲಿ ಶೂಟಿಂಗ್ ನಡೆಯಲಿದೆ.ಕೌಟುಂಬಿಕ ಕಥಾಹಂದರ ಕಥೆಯ ಈ ಚಿತ್ರದಲ್ಲಿ ರಾಧಿಕಾ ಭೈರಾದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ರಾಧಿಕಾ ಮಗಳು ಶಮಿಕಾ ಕೆ. ಸ್ವಾಮಿ ಕ್ಲ್ಯಾಪ್ ಮಾಡುವ ಮೂಲಕ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಮೂಡಿಬರುವ ಮೂರನೇ ಚಿತ್ರ ಭೈರಾದೇವಿ ಗೆ ಚಾಲನೆ ದೊರಕಿದೆ.Sign in to your account
Username or Email Address


Password

 Remember Me


