ಬೆಂಗಳೂರು: ರಾಜ್ಯದಲ್ಲಿ ಮತ್ತೆ ಪೋಸ್ಟರ್ ವಾರ್ ಶುರುವಾದಂತಿದೆ. ಬೆಂಗಳೂರಿನ ಸದಾಶಿವನಗರದ ರಮೇಶ್ ಜಾರಕಿಹೊಳಿ (Ramesh Jarakiholi) ನಿವಾಸಕ್ಕೆ ಅವಾಚ್ಯ ಪದ ಬಳಕೆ ಮಾಡಿರುವ ಪೋಸ್ಟರ್ ಗಳನ್ನು ಕಿಡಿಗೇಡಿಗಳು ಅಂಟಿಸಿ ಹೋಗಿದ್ದಾರೆ.ಪೋಸ್ಟರ್ ನಲ್ಲಿ ಏಕವಚನದಲ್ಲಿ ನಿಂದನೆ ಜೊತೆಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಇದೇ ನಿನ್ನ ಸಂಸ್ಕೃತಿ ಎಂದು ಪದ ಬಳಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಅಂಟಿಸಿದ್ದ ಪೋಸ್ಟರ್ ತೆರವುಮಾಡಿದ್ದಾರೆ. ಈ ಪೋಸ್ಟರ್ ಬಗ್ಗೆ ಇದೀಗ ಭಾರೀ ಚರ್ಚೆ ಶುರುವಾಗಿದೆ.ಸೋಮವಾರ ಡಿಸಿಎಂ ಡಿಕೆಶಿ (DK Shivakumar) ವಿರುದ್ಧ ರಮೇಶ್ ಜಾರಕಿಜೊಳಿ ಸುದ್ದಿಗೋಷ್ಠಿ ನಡೆಸಿ ಡಿಕೆ ಹೆದರು ಪುಕ್ಕಲ, ಮೋಸಗಾರ ಎಂದು ಜರೆದಿದ್ದರು. ರಾಜ್ಯ ಸರ್ಕಾರದ ಪತನಕ್ಕೆ ಬಿಜೆಪಿ(BJP) ಸ್ಕೆಚ್ ಹಾಕಿಲ್ಲ. ಆಪರೇಷನ್ ಕಮಲವನ್ನು ನಾವು ಮಾಡ್ತಿಲ್ಲ. ಸುಳ್ಳು ಗ್ಯಾರಂಟಿ ಕೊಟ್ಟಿದ್ದನ್ನ ಈಡೇರಿಸಲು ಆಗದ ಕಾರಣ ಆಪರೇಷನ್ ಕಮಲ ಮಾಡುತ್ತಿದ್ದಾರೆ ಅಂತಾ ಡಿಕೆ ಗ್ಯಾಂಗ್ ಹೇಳ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದರು. 2019ರಲ್ಲಿ ಅನಿವಾರ್ಯ ಇತ್ತು ಆಪರೇಷನ್ ಮಾಡಿದ್ವಿ. ಅಂದು ಡಿಕೆಶಿಯ ಸರ್ವಾಧಿಕಾರಿ ಧೋರಣೆ ಮತ್ತು ಸೊಕ್ಕಿನಿಂದ ಸರ್ಕಾರವನ್ನು ಬೀಳಿಸಬೇಕಾಯಿತು ಅಂದಿದ್ದರು. ಇದನ್ನೂ ಓದಿ: ನಾನು ಯಾವತ್ತಿದ್ದರೂ ಸಿದ್ದರಾಮಯ್ಯ ಪರ, ಸಚಿವರ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟಿದ್ದು: ಜಮೀರ್ ಅಹ್ಮದ್ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ (Congress) ಕಾರ್ಯಕರ್ತರು, ಡಿಕೆ ಬೆಂಬಲಿಗರು ಪೋಸ್ಟರ್ ಅಂಟಿಸಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಸ್ಥಳಕ್ಕೆ ಶೇಷಾದ್ರಿಪುರ ಉಪ ವಿಭಾಗ ಎಸಿಪಿ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


