ಚಿಕ್ಕಬಳ್ಳಾಪುರ: ಮಗು ಅಂಗವೈಕಲ್ಯದಿಂದ ಹುಟ್ಟಿದೆ ಎಂದು ದಂಪತಿ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ ತಾಲೂಕಿನ ಹಳ್ಳಿಯೊಂದರ ಮಹಿಳೆ ಹೆರಿಗೆಗೆಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ಹುಟ್ಟಿದ ಮಗುವಿನ ಬಲ ಗೈ ಹಾಗೂ ಎಡ ಕಾಲಿನಲಲ್ಲಿ ಬೆರಳುಗಳಿಲ್ಲದೆ ಹುಟ್ಟಿದ್ದು ಆರೋಗ್ಯವಾಗಿಯೇ ಇದೆ. ಆದ್ರೆ ಅಂಗವೈಕಲ್ಯದಿಂದ ಹುಟ್ಟಿದ ಮಗು ತಮಗೆ ಬೇಡ ಅಂತ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆಸ್ಪತ್ರೆಯಲ್ಲೇ ಹುಟ್ಟಿದ ಮಗುವನ್ನ ಅನಾಥ ಮಾಡಿ ಬಿಟ್ಟು ಹೋಗಿದ್ದಾರೆ.ನವಜಾತ ಮಗುವನ್ನು ಈ ರೀತಿ ಬಿಟ್ಟುಹೋಗುವುದು ಸರಿಯಲ್ಲ, ಕೆಲ ದಿನಗಳ ಕಾಲ ಕನಿಷ್ಠ ಎದೆ ಹಾಲು ಆದರೂ ಮಗುವಿಗೆ ಉಣಿಸಿ, ಮತ್ತೆ ಮಗು ಬೇಡವಾದ್ರೇ ವಾಪಾಸ್ ತಂದು ಕೊಡಿ ಅಂತ ಅಧಿಕಾರಿಗಳು ಹಾಗೂ ವೈದ್ಯರು ದಂಪತಿಗೆ ಪರಿ ಪರಿಯಾಗಿ ಮನವಿ ಮಾಡಿದ್ರೂ ದಂಪತಿಯ ಮನಸ್ಸು ಮಾತ್ರ ಕರಗಿಲ್ಲ. ದಂಪತಿಯ ಈ ನಡೆಗೆ ಎಲ್ಲೆಡೆ ಅಸಮಾಧಾನ ವ್ಯಕ್ತವಾಗಿದೆ.Sign in to your account
Username or Email Address


Password

 Remember Me


