ಮೈಸೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಸಾವಿನ ಬೆನ್ನಲ್ಲೇ ತಂದೆ ಕೂಡ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಬೆಳವಾಡಿ ಗ್ರಾಮದ ಭೈರೇಗೌಡ(33) ಕ್ಯಾನ್ಸರ್ ರೋಗದಿಂದ ಸಾವನ್ನಪ್ಪಿದ್ದರು. ಮಗನ ಸಾವಿನಿಂದಾದ ಆಘಾತಕ್ಕೆ ಶವಯಾತ್ರೆ ಹೋಗುವ ಸಂದರ್ಭದಲ್ಲಿ ತಂದೆ ಪುಟ್ಟೇಗೌಡ (65)ರವರಿಗೆ ಹೃದಯಾಘಾತವಾಗಿದೆ. ಗ್ರಾಮಸ್ಥರು ಮಗನ ಶವ ಸ್ಮಶಾನದಲ್ಲಿಟ್ಟು ಪುಟ್ಟೇಗೌಡಗೌಡರನ್ನ ಆಸ್ಪತ್ರೆಗೆ ಕರೆದೊಯ್ದುತ್ತಿದ್ದ ವೇಳೆ ಪುಟ್ಟೇಗೌಡ ಕೂಡ ಸಾವನ್ನಪ್ಪಿದ್ದಾರೆ.ಸ್ಮಶಾನದಲ್ಲಿಯೇ ಮಗನ ಶವ ಇಟ್ಟು ತಂದೆ ಪುಟ್ಟೇಗೌಡರಿಗೆ ಮನೆಯಲ್ಲಿ ವಿಧಿ ವಿಧಾನ ನೆರವೇರಿಸಿ ತಂದೆ, ಮಗನ ಶವಕ್ಕೆ ಒಂದೇ ಚಿತೆಯಲ್ಲಿ ಅಗ್ನಿ ಸ್ಪರ್ಶ ಮಾಡಲಾಗಿದೆ. ತಂದೆ-ಮಗನ ಸಾವು ಮನಕಲಕುವಂತಿತ್ತು. ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.Sign in to your account
Username or Email Address


Password

 Remember Me


