ರಾಯಚೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದಲ್ಲಿನ ರಸ್ತೆ ಪಕ್ಕದಲ್ಲಿನ ಹೋಟಲ್ ನಲ್ಲಿ ಉತ್ತರ ಕರ್ನಾಟಕದ ಜನಪ್ರಿಯ ಖಾದ್ಯ ಮಿರ್ಚಿ ಬಜ್ಜಿ, ಗಿರ್ಮಿಟ್ ರುಚಿಯನ್ನು ಸವಿದಿದ್ದಾರೆ.ರಾಹುಲ್ ಗಾಂಧಿ ಜೊತೆ ಸಚಿವರು ಮತ್ತು ಮುಖಂಡರೆಲ್ಲಾ ಮಿರ್ಚಿ ಬಜ್ಜಿ, ಗಿರ್ಮಿಟ್ ಸವಿದರು. ಮೌಲಾ ಸಾಬ್ ಎಂಬವರ ಹೋಟೆಲ್ ನಲ್ಲಿ ಮಿರ್ಚಿ ಬಜ್ಜಿ ಸವಿದ ಬಳಿಕ, ರಾಹುಲ್ ಗಾಂಧಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.ಮಿರ್ಚಿ ಬಜ್ಜಿ ಸವಿದ ಬಳಿಕ ರಾಹುಲ್ ಗಾಂಧಿ ಬಳಿ ಹಣವಿಲ್ಲದ ಕಾರಣ ಪಕ್ಕದಲ್ಲಿಯೇ ಕುಳಿತಿದ್ದ ಡಿಕೆ ಶಿವಕುಮಾರ್ ರಾಹುಲ್ ಜೇಬಿಗೆ 2 ಸಾವಿರ ರೂ. ನೋಟನ್ನು ಇಟ್ಟರು. ರಾಹುಲ್ ಗಾಂಧಿ ಹೋಟೆಲ್ ಮಾಲೀಕರಿಗೆ ಹಣ ನೀಡಲು ಮುಂದಾದ್ರೂ ಸ್ವೀಕರಿಸಲಿಲ್ಲ.Sign in to your account
Username or Email Address


Password

 Remember Me


