ಬೆಂಗಳೂರು: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಕಾರ್ಯಕ್ರಮ ಆಡಿಷನ್ ವೇಳೆ ಆಯೋಜಕರು ವಿದ್ಯಾರ್ಥಿನಿಯರಿಗೆ ಅಶ್ಲೀಲ ಪ್ರಶ್ನೆ ಕೇಳಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ನಗರದ ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋಗಾಗಿ ಆಡಿಶನ್ ಆಯೋಜಿಸಿತ್ತು. ಈ ಆಡಿಶನ್ ಗೆ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಹುಡುಗಿಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಯೋಜಕರು ಸೆಕ್ಸ್ ಮಾಡೋಕೆ ಬರುತ್ತಾ? ಬಾಯ್ ಫ್ರೆಂಡ್ ಇದ್ದಾರಾ ಎನ್ನುವ ಪ್ರಶ್ನೆ ಮಾಡಿದ್ದು ಅಲ್ಲದೇ ಹುಡುಗನಿಗೆ ಕಿಸ್ ಮಾಡು ಅಂತಾ ಒತ್ತಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಆಡೀಶನ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿ ಶರ್ಲಿನ್ ಪ್ರತಿಕ್ರಿಯಿಸಿ, ನಾನು ಚಿತ್ರರಂಗದಲ್ಲಿ ಸೇರಬೇಕೆಂದು ಆಸೆ ಇಟ್ಟುಕೊಂಡು ಈ ಆಡಿಶನ್ ನಲ್ಲಿ ಭಾಗವಹಿಸಿದ್ದೆ. ಆದರೆ ಇಲ್ಲಿ ಅಲ್ಲಿಂದ ಹುಡುಗನಿಗೆ ಕಿಸ್ ಮಾಡು ಎಂದು ಕೇಳಿದ್ರು. ಅಷ್ಟೇ ಅಲ್ಲದೇ ಎಲ್ಲರ ಮುಂದೆ ಡ್ರೆಸ್ ಚೆಂಜ್ ಮಾಡು ಎಂದು ಪ್ರಶ್ನೆ ಕೇಳಿದ್ರು. ಒಂದು ವೇಳೆ ಅವರು ಹೇಳಿದಂತೆ ಕೇಳದೇ ಇದ್ದಲ್ಲಿ ಅಲ್ಲೇ ನಮ್ಮನ್ನು ರಿಜೆಕ್ಟ್ ಮಾಡುತ್ತಾರೆ. ನಾವು ಏನೋ ಕನಸು ಇಟ್ಟುಕೊಂಡು ಬಂದಿರುತ್ತೇವೆ. ಹೀಗಿರುವಾಗ ಈ ರೀತಿ ಅಸಭ್ಯ ಪ್ರಶ್ನೆ ಕೇಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.ಆದರೆ ಈ ಆಡಿಶನ್ ನಲ್ಲಿ ಭಾಗವಹಿಸಿದ್ದ ಹುಡುಗಿಯರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆಯೋಜಕರು ಈ ರೀತಿಯ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ಆಡಿಶನ್ ನಲ್ಲಿ ಸೆಲೆಕ್ಟ್ ಆಗದೇ ಇರುವುದಕ್ಕೆ ಈ ರೀತಿಯ ಆರೋಪ ಮಾಡಲಾಗಿದೆ. ಸೆಕ್ಸ್ ವಿಚಾರವನ್ನು ಆಯೋಜಕರು ಪ್ರಶ್ನಿಸಿಲ್ಲ. ಬಾಯ್ ಫ್ರೆಂಡ್ ಇದ್ದಾರಾ ಎಂದು ಕೇಳಿದ್ದಾರೆ. ಅಶ್ಲೀಲವಾಗಿ ಬೇರೆ ಏನು ಪ್ರಶ್ನಿಸಿಲ್ಲ. ಒಂದು ವೇಳೆ ರೀತಿ ಪ್ರಶ್ನೆ ಕೇಳಿದ್ದರೆ ಮೊದಲೇ ಹೇಳಬಹುದಿತ್ತು. ಆಡಿಷನ್ ಮುಗಿದು ಎರಡನೇ ಹಂತಕ್ಕೆ ಸೆಲೆಕ್ಟ್ ಆದ ಮೇಲೆ ವಿವಾದ ಸೃಷ್ಟಿಯಾಗಿದೆ. ಈಗ ಆಡಿಷನ್ ರದ್ದಾಗಿದ್ದರಿಂದ ನಮಗೆಲ್ಲ ಬೇಸರವಾಗಿದೆ ಎಂದು ಹೇಳಿದ್ದಾರೆ.ಈ ಆರೋಪದ ಬಗ್ಗೆ ಆಯೋಜಕರನ್ನು ಪ್ರಶ್ನಿಸಿದ್ದಾಗ, ನಾವು ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿದ್ದೇವೆ. ಈ ರೀತಿಯ ಪ್ರಶ್ನೆಗಳನ್ನು ನಾವು ಕೇಳಿಲ್ಲ. ಆಕೆ ಸುಳ್ಳು ಹೇಳುತ್ತಿದ್ದಾಳೆ. ಈ ರೀತಿಯ ಪ್ರಶ್ನೆ ಕೇಳಿದ ವ್ಯಕ್ತಿ ಯಾರು ಎಂದು ನಾವು ಆಕೆಯಲ್ಲಿ ಪಾಯಿಂಟ್ ಮಾಡಿ ತೋರಿಸಿ ಎಂದು ಕೇಳಿದಾಗ ಆಕೆ ಯಾರನ್ನು ತೋರಿಸಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. Sign in to your account
Username or Email Address


Password

 Remember Me


