ಚಾಮರಾಜನಗರ: ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮದುವೆ ಖರ್ಚಿಗೆ ಬಡ ಕುಟುಂಬಗಳಿಗೆ ಅನುಕೂಲವಾಗಲೆಂದು 2006 ಹಾಗೂ 2007ನೇ ಸಾಲಿನಲ್ಲಿ ಬಿಜೆಪಿಯ ಯಡಿಯೂರಪ್ಪ ನೇತೃತ್ವದ ಸರ್ಕಾರ ಭಾಗ್ಯ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತ್ತು.ಆದರೆ ಆ ಯೋಜನೆ ಎಷ್ಟರ ಮಟ್ಟಿಗೆ ಫಲಾನುಭವಿಗಳಿಗೆ ಲಭ್ಯವಾಗುತ್ತಿದೆ ಎಂದು ಮಾತ್ರ ಯೋಚನೆ ಮಾಡಿಲ್ಲ. ಇದೀಗ ಕಳೆದ ಹತ್ತು ವರ್ಷಗಳಿಂದಲೂ ಹೆಣ್ಣು ಮಕ್ಕಳನ್ನು ಹೆತ್ತ ತಂದೆ-ತಾಯಿಗಳು ಈ ಭಾಗ್ಯ ಲಕ್ಷ್ಮಿ ಯೋಜನೆಯ ಬಾಂಡನ್ನು ತೆಗೆದುಕೊಳ್ಳಲು ಪ್ರತಿ ನಿತ್ಯ ಸರ್ಕಾರಿ ಕಚೇರಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಈ ಯೋಜನೆಯ ಫಲಾನುಭವಿಗಳಾದ ಚಾಮರಾಜನಗರ ಜಿಲ್ಲೆಯ ಸಾವಿರಾರು ಮಂದಿ ತಮ್ಮ ಹೆಣ್ಣು ಮಕ್ಕಳಿಗೆ ಬಂದಿರುವ ಬಾಂಡ್‍ಗಳನ್ನು ಪಡೆಯಲು ಅವರಿವರನ್ನು ವಿಚಾರಿಸುತ್ತಾ, ತಾವು ಯೋಜನೆಗೆ ಅರ್ಹರಾಗಿರುವ ಚೀಟಿಗಳನ್ನು ಹಿಡಿದುಕೊಂಡು ಅಧಿಕಾರಿಗಳ ಪ್ರತಿ ನಿತ್ಯ ಹೋಗಿ ಬರಿಗೈಯಲ್ಲಿ ವಾಪಸ್ಸಾಗುತ್ತಿದ್ದಾರೆ.Sign in to your account
Username or Email Address


Password

 Remember Me


