ಬೆಂಗಳೂರು: ಪಬ್ಲಿಕ್ ಟಿವಿ ಸಮೂಹದ ಮೂರನೇ ಚಾನಲ್ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಫೆಬ್ರವರಿ 12ರಿಂದ ನಿಮ್ಮ ಮುಂದೆ ಬರಲಿದೆ. ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಟೆಸ್ಟ್ ಸಿಗ್ನಲ್ ಆರಂಭವಾಗಿದೆ.ಈ ಹಿನ್ನೆಲೆಯಲ್ಲಿಂದು ಪಬ್ಲಿಕ್ ಟಿವಿ ಕಚೇರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಸಿಇಒ ಅರುಣ್ ಕುಮಾರ್, ಸಿಒಒ ಸಿ.ಕೆ.ಹರೀಶ್ ಕುಮಾರ್ ಸೇರಿದಂತೆ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿ ಪೂಜೆಯಲ್ಲಿ ಭಾಗಿಯಾಗಿದ್ದರು.ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಆರಂಭವಾದ ಪಬ್ಲಿಕ್ ಟಿವಿ ಕೂಡಾ ಫೆಬ್ರವರಿ 12ರಂದು 6ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. 2012ರ ಫೆಬ್ರವರಿ 12ರಂದು ಪಬ್ಲಿಕ್ ಟಿವಿ ಲೋಕಾರ್ಪಣೆಗೊಂಡಿತ್ತು. ಬಳಿಕ 2014ರ ಸೆಪ್ಟೆಂಬರ್ 28ರಂದು ಪಬ್ಲಿಕ್ ಮ್ಯೂಸಿಕ್ ವಾಹಿನಿ ಆರಂಭಗೊಂಡಿತ್ತು.2012ರಲ್ಲಿ ಆರಂಭಗೊಂಡ ಪಬ್ಲಿಕ್ ಟಿವಿ ಹಾಗೂ 2014ರಲ್ಲಿ ಆರಂಭಗೊಂಡ ಪಬ್ಲಿಕ್ ಮ್ಯೂಸಿಕ್ ವಾಹಿನಿ ರಾಜ್ಯದ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದೆ. ಇದಕ್ಕೆ ಕಾರಣೀಕರ್ತರಾದ ಜನರಿಗೆ ನಾವು ಆಭಾರಿ. ಈ ಹಿಂದೆ ಎರಡು ಚಾನೆಲ್‍ಗಳನ್ನು ಕೈ ಹಿಡಿದಂತೆಯೇ ಪಬ್ಲಿಕ್ ಮೂವೀಸ್ ವಾಹಿನಿಯನ್ನು ಕೂಡಾ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ. ನಮ್ಮ ಮೇಲೆ ವಿಶ್ವಾಸವಿಟ್ಟ ಎಲ್ಲಾ ಕನ್ನಡಿಗರಿಗೂ ಧನ್ಯವಾದ ಎಂದು ಪಬ್ಲಿಕ್ ಟಿವಿ, ಮ್ಯೂಸಿಕ್ ಚಾನೆಲ್ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹೇಳಿದ್ದಾರೆ.ಈಗಾಗಲೇ ನಿಖರ ಸುದ್ದಿ, ಮನಸ್ಸಿಗೆ ಮುದ ನೀಡುವ ಸಂಗೀತದ ಮೂಲಕ ನಿಮ್ಮ ಮನಗೆದ್ದಿರುವ ಪಬ್ಲಿಕ್ ಟಿವಿ, ಈಗ ಸಿನಿಮಾದ ಮೂಲಕ ನಿಮ್ಮ ಮನರಂಜಿಸಲು ಆಗಮಿಸುತ್ತಿದೆ.ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ನಲ್ಲಿ ನೀವು 24 ಗಂಟೆಗಳ ಕಾಲವೂ ಕನ್ನಡ ಸಿನೆಮಾಗಳನ್ನು ನೋಡಿ ಆನಂದಿಸಬಹುದು. ನಿಮ್ಮೂರಲ್ಲಿ ಚಾನೆಲ್ ವೀಕ್ಷಣೆಗೆ ಲಭ್ಯವಾಗದಿದ್ದರೆ ನೀವು ನಿಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಬಹುದು. Sign in to your account
Username or Email Address


Password

 Remember Me


