ಬೆಂಗಳೂರು: ಚಿರಂಜೀವಿ ಸರ್ಜಾ, ಗುರುದೇಶ್ ಪಾಂಡೆ ಕಾಂಬಿನೇಷನ್‍ನ ಸಂಹಾರ ಸಿನಿಮಾವನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ನಟ ಧ್ರುವ ಸರ್ಜಾ ವೀಕ್ಷಿಸಿದ್ದಾರೆ.ಅಭಿಮಾನಿಗಳ ಜೊತೆ ಕೂತು ಸಂಹಾರ ಸಿನಿಮಾ ನೋಡಿದ ಆ್ಯಕ್ಷನ್ ಪ್ರೀನ್ಸ್ ಸಖತ್ ಖುಷಿಪಟ್ಟರು. ತಮ್ಮ ನೆಚ್ಚಿನ ಹೀರೋ ನೋಡಲು ಮುಗಿಬಿದ್ದ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂತೋಷ ಪಟ್ಟರು.ಸಂಹಾರ ಸಿನಿಮಾ ನೋಡಿದ ಧ್ರುವ, ತ್ರಿವೇಣಿ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದ್ದು ತುಂಬಾ ಖುಷಿಯಾಯಿತು. ಸಂಹಾರ ಚಿತ್ರ ನಿಜವಾಗಿಯೂ ಸಖತ್ ಆಗಿದೆ. ಗುರುದೇಶ್ ಪಾಂಡೆ ಸರ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಚಿಕ್ಕಣ್ಣ ಅವರ ನಟನೆ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಮ್ಮ ಅಣ್ಣನ ಬಗ್ಗೆ ಏನೂ ಹೇಳುವ ಹಾಗಿಲ್ಲ ಎಂದು ಧ್ರುವ ಸರ್ಜಾ ಹೊಗಳಿದರು.ಅಷ್ಟೇ ಅಲ್ಲದೇ ಹರಿಪ್ರಿಯಾರ ಅಮೋಘ ನಟನೆಯನ್ನು ಚಿತ್ರದಲ್ಲಿ ನೋಡಬಹುದಾಗಿದೆ. ಈ ಬಾರಿ ಹರಿಪ್ರಿಯಾ ವಿಭಿನ್ನ ಶೇಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ತುಂಬಾನೇ ಎಂಟರ್‍ಟೈನ್‍ಮೆಂಟ್ ಜೊತೆ ಕಾಮಿಡಿಯನ್ನು ಹೊಂದಿದೆ. ಸಂಹಾರ ಇಡೀ ಕುಟುಂಬ ನೋಡುವಂತಹ ಸಿನಿಮಾವಾಗಿದ್ದು, ಮತ್ತೊಮ್ಮೆ ನೋಡಬೇಕು ಎಂಬ ಆಸೆ ಆಗುತ್ತದೆ. ದಯವಿಟ್ಟು ಈ ಸಿನಿಮಾ ನೋಡಿ. ಇದೊಂದು ಫ್ಯಾಮಿಲಿ ಜೊತೆ ನೋಡುವಂತಹ ಸಿನಿಮಾ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ವಿಭಿನ್ನ ರೀತಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಿಳಿಸಿದರು.Sign in to your account
Username or Email Address


Password

 Remember Me


