ಬೆಂಗಳೂರು: ಶಿವರಾತ್ರಿ ಹಬ್ಬಕ್ಕೆ ಗ್ರಾಹಕರಿಗೊಂದು ಗುಡ್ ನ್ಯೂಸ್ ಇಲ್ಲಿದೆ. ಹಬ್ಬಕ್ಕಾಗಿ ರೈತರು ಕೊಡುಗೆ ನೀಡಿದ್ದು, ಹಾಪ್‍ ಕಾಮ್ಸ್ ನಲ್ಲಿ ತರಕಾರಿಗಳನ್ನ ಕೇವಲ ಹತ್ತು ರೂಪಾಯಿಗೆ ನೀಡಲಾಗ್ತಿದೆ.ಶಿವರಾತ್ರಿಗೆ ಹಾಪ್‍ ಕಾಮ್ಸ್ ಈ ಸ್ಪೆಷಲ್ ಆಫರ್ ನೀಡಿದೆ. ಅಗ್ಗದ ದರದಲ್ಲಿ ತರಕಾರಿಗಳು ಸಿಗಲಿವೆ. ಮೂಲಂಗಿ, ಎಲೆಕೋಸು ಟೊಮೇಟೋ, ಸೌತೆಕಾಯಿ, ಬೀಟ್‍ರೂಟ್ ಗೆ 10 ರೂಪಾಯಿ. ಬೀನ್ಸ್, ಕ್ಯಾರೆಟ್, ತೊಂಡೆಕಾಯಿ, ಆಲೂಗಡ್ಡೆ, ತೆಂಗಿನಕಾಯಿ ಇಪ್ಪತ್ತು ರೂಪಾಯಿ.ಪುದೀನಾ, ಕೊತ್ತಂಬರಿ ಸೊಪ್ಪು, ಬಸಳೆ ಸೊಪ್ಪು ಏನೇ ತಗೊಂಡ್ರು ಬರೀ ಹತ್ತು ರೂಪಾಯಿ. ಭಾನುವಾರ ಹಾಗೂ ಸೋಮವಾರ ಹಬ್ಬದ ಪ್ರಯುಕ್ತ ಈ ಬಂಪರ್ ಆಫರ್ ನೀಡಲಾಗಿದೆ.ಹಬ್ಬದಂದು ರೈತರಿಂದ ಕಡಿಮೆ ಬೆಲೆಯಲ್ಲಿ ಗ್ರಾಹಕರು ಹೆಚ್ಚು ತರಕಾರಿ, ಸೊಪ್ಪು ಖರೀದಿಸಬಹುದಾಗಿದೆ.Sign in to your account
Username or Email Address


Password

 Remember Me


