ತುಮಕೂರು: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯರ ಹಾಗೂ ಮಹಿಳೆಯರ ಫೋಟೋ ತೆಗೆದು ವಿಕೃತ ಖುಷಿ ಪಡುತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ತುಮಕೂರು ನಗರದ ಎಸ್‍ಐಟಿ ಬಳಿ ನಡೆದಿದೆ.ಎಸ್‍ಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರನೇ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ವ್ಯಕ್ತಿ.ಶುಕ್ರವಾರ ಸಂಜೆ ಎಸ್‍ಐಟಿ ಹಿಂದಿನ ಗೇಟ್ ಬಳಿ ಕದ್ದುಮುಚ್ಚಿ ಯುವತಿಯರ ಭಾವಚಿತ್ರವನ್ನು ಮೊಬೈಲ್ ಮೂಲಕ ಸೆರೆಹಿಡಿಯುತ್ತಿದ್ದ. ಇದನ್ನು ಗಮನಿಸಿದ್ದ ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ. ಅಲ್ಲದೆ ಶಿವಕುಮಾರನ ಮೊಬೈಲ್ ವಶಪಡಿಸಿಕೊಂಡಾಗ ಅದರಲ್ಲಿ ಎಸ್‍ಐಟಿ ಕಾಲೇಜು ಯುವತಿಯರ ಹಲವು ಫೊಟೋ ಇರುವುದು ಕಂಡುಬಂದಿದೆ.ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.Sign in to your account
Username or Email Address


Password

 Remember Me


