ಬೆಂಗಳೂರು: ಕ್ಯಾನ್ಸರ್ ನಿಂದ ಜೀವನದ ಕೊನೆಯ ಅಂಚಿನಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಗೆ ದರ್ಶನ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.ಶಿವಮೊಗ್ಗದ ರೇವಂತ್ ಅವರಿಗೆ ದರ್ಶನ್ ಅಂದ್ರೆ ಅಚ್ಚುಮೆಚ್ಚು. ನೆಚ್ಚಿನ ನಟನ ಎಲ್ಲಾ ಸಿನಿಮಾ ನೋಡಿರುವ ಅವರು, ಪ್ರತಿ ಹುಟ್ಟುಹಬ್ಬದ ದಿನ ಬೆಂಗಳೂರಿಗೆ ಹೋಗಿ ಶುಭ ಕೋರಿ ಬರುತ್ತಾರೆ. ದರ್ಶನ್ ಅವರನ್ನು ಭೇಟಿಯಾಗಬೇಕು, ಮಾತನಾಡಬೇಕೆಂಬ ಬಯಕೆ ಅವರಿಗೆ ಜಾಸ್ತಿಯಾಗಿತ್ತು. ಆದ್ದರಿಂದ ದರ್ಶನ್ ತಮ್ಮ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ, ನಾನು ಬ್ಯುಸಿಯಾಗಿದ್ದೇನೆ. ಆದಷ್ಟು ಬೇಗ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದ್ದಾರೆ.ಮೂಲತಃ ಶಿವಮೊಗ್ಗದವರಾದ ರೇವಂತ್, ತನ್ನ 20ನೇ ವಯಸ್ಸಿಗೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ತಮ್ಮ, ಅಕ್ಕ ಹಾಗೂ ಅಪ್ಪ-ಅಮ್ಮ ಇದ್ದಾರೆ. ಶಿವಮೊಗ್ಗದಲ್ಲಿ ವಾಸವಿರುವ ರೇವಂತ್ ಸಾಕಷ್ಟು ದಿನಗಳಿಂದ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ಚಿಕಿತ್ಸೆಯನ್ನು ಪಡೆದು ಹೋಗಿದ್ದರು. ಆದರೆ ಕ್ಯಾನ್ಸರ್ ಮತ್ತೆ ಕಾಣಿಸಿದ್ದು ಉಲ್ಭಣಿಸಿದೆ.ಪ್ರತಿ ವರ್ಷ ಫೆ.16ಕ್ಕೆ ರೇವಂತ್ ದರ್ಶನ್ ಹುಟ್ಟುಹಬ್ಬಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಶುಭ ಹಾರೈಸುತ್ತಿದ್ದರು. ಆದರೆ ಈ ವರ್ಷ ದರ್ಶನ್ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ದುಖಃದಲ್ಲಿದ್ದರು. ವೈದ್ಯರು ಇನ್ನು ಮುಂದೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ರೇವಂತ್ ಅವರ ಕಡೆಯ ಆಸೆಯಾಗಿ ದರ್ಶನ್ ಅವರನ್ನು ನೋಡಬೇಕು ಎಂದು ಹೇಳಿದ್ದರು. ಇದನ್ನು ಓದಿ: ಪ್ರೀತಿಯ ಅಭಿಮಾನಿಯ ಕೊನೆ ಆಸೆಯನ್ನು ನೆರೆವೇರಿಸುತ್ತಾರಾ ದಚ್ಚು!?Sign in to your account
Username or Email Address


Password

 Remember Me


