ಬಳ್ಳಾರಿ: ಒಂದೆಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಮತ್ತೊಂದೆಡೆ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶಾಸಕ ಆನಂದ್ ಸಿಂಗ್ ಹೊಸದೊಂದು ಶಪಥ ಮಾಡಿದ್ದಾರೆ ಎನ್ನಲಾಗಿದೆ.ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್ 70 ಸಾವಿರ ಮತಗಳಿಂದ ಗೆದ್ದಿದ್ರು. ಆದ್ರೆ ಈ ಬಾರಿ ಲಕ್ಷಕ್ಕೂ ಹೆಚ್ಚು ಮತಗಳನ್ನು ಗೆದ್ದೇ ಮನೆಗೆ ಹೋಗ್ತೀನಿ ಅಂತ ಆನಂದ್ ಸಿಂಗ್ ಶಪಥ ಮಾಡಿದ್ದಾರೆ. ಇದಕ್ಕಾಗಿ ಕಳೆದ ನಾಲ್ಕು ತಿಂಗಳಿಂದ ಮನೆಗೂ ಹೋಗದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ನಾಳೆ ಬಳ್ಳಾರಿಗೆ ರಾಹುಲ್ ಗಾಂಧಿ ಎಂಟ್ರಿ- ಸಂಕಷ್ಟದಲ್ಲಿ ಕೈ ಹಿಡಿದ ಸ್ಥಳದಲ್ಲಿ ಚುನಾವಣಾ ಪ್ರಚಾರಕ್ಕೆ ಕಹಳೆಅಕ್ಟೋಬರ್ 4ರಂದು ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಆನಂದ್ ಸಿಂಗ್ ಈವರೆಗೆ ಮನೆಗೆ ಹೋಗಿಲ್ಲ. ನಿತ್ಯವೂ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದು, ರಾತ್ರಿ ಗ್ರಾಮವಾಸ್ತವ್ಯ ಇಲ್ಲವೇ ಹೋಟೆಲ್‍ನಲ್ಲಿ ತಂಗುತ್ತಿದ್ದಾರೆ. ಕುಟುಂಬದವರು ಭೇಟಿಯಾಗಬೇಕಾದ್ರೆ ಆನಂದ್ ಸಿಂಗ್ ಇರುವ ಜಾಗಕ್ಕೆ ಬಂದು ಹೋಗ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:Sign in to your account
Username or Email Address


Password

 Remember Me


