ದಾವಣಗೆರೆ: ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಅಕ್ರಮ ಮರಳು ದಂಧೆಕೋರರು ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕ್ಯಾಸೇನಹಳ್ಳಿ ಬೀಟ್‍ನ ದೇವಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ.ದೇವಿಪುರ ಅರಣ್ಯ ಪ್ರದೇಶದಲ್ಲಿ ದಂಧೆಕೋರರು ಅಕ್ರಮವಾಗಿ ಟ್ರ್ಯಾಕ್ಟರ್‍ಗೆ ಮರಳು ತುಂಬುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮರಳು ದಂಧೆಕೋರರನ್ನು ತಡೆಯಲು ಮುಂದಾದ್ರು. ಆಗ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ದಂಧೆಕೋರರು ಏಕಾಏಕಿ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.ಘಟನೆಯಲ್ಲಿ ಅರಣ್ಯ ರಕ್ಷಕ ಶಿವರೆಡ್ಡಿ, ವಾಹನ ಚಾಲಕ ಚಂದ್ರುಗೆ ಗಂಭೀರ ಗಾಯಗಳಾಗಿದ್ದು, ಅರಣ್ಯ ವೀಕ್ಷಕ ಬೋರಯ್ಯ ಹಾಗೂ ಹನುಮಂತಪ್ಪಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಲ್ಲೆ ನಡೆಸಿದ ಓಬಳೇಶ್, ಪಾಪಣ್ಣ, ಬೆಳ್ಳಿ ನಾಗರಾಜ, ದಾದ, ಮಹಾಂತೇಶ್, ಗುರುಸ್ವಾಮಿ, ಹನುಮಂತ ಹಾಗೂ ರಂಗಪ್ಪ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Sign in to your account
Username or Email Address


Password

 Remember Me


