ಬೆಂಗಳೂರು: ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಚಂದನ್ ಶೆಟ್ಟಿಗೆ ಅಭಿಮಾನಿ ಬಳಗ ದೊಡ್ಡದಾಗಿ ಬೆಳೆದಿದ್ದು, ಅಮ್ಮನಿಂದ, ಗುರುವಿನಿಂದ ಹಾಗೂ ಕಿಚ್ಚ ಸುದೀಪ್ ಅವರಿಂದಲೂ ಉಡುಗೊರೆ ಸಿಕ್ಕಿದೆ. ಈಗ ಬಾಕ್ಸ್ ಆಫೀಸ್ ಸುಲ್ತಾನ್ ಕಡೆಯಿಂದನೂ ಆಫರ್ ಸಿಕ್ಕಿದೆ.ಚಂದನ್ ಶೆಟ್ಟಿ ಹಾಡುಗಳಿಗೆ ಕನ್ನಡಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ-5 ವಿನ್ನರ್ ಆದ ಮೇಲೆ `ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದು, ಈಗ ಚಂದನ್‍ಗೆ ಮತ್ತೊಂದು ದೊಡ್ಡ ಆಫರ್ ಒಂದು ಹುಡುಕಿಕೊಂಡು ಬಂದಿದೆ. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಎನ್ನುವುದು ಕುತೂಹಲಕಾರಿಯಾದ ಸಂಗತಿಯಾಗಿದೆ.ಚಂದನ್ ಶೆಟ್ಟಿ `ಸೀಜರ್’ ಹಾಗೂ `ಗಾಂಚಲಿ’ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಈಗ ದರ್ಶನ್ ಅವರ ಮುಂದಿನ ಚಿತ್ರಕ್ಕೆ ಮ್ಯೂಸಿಕ್ ಮಾಡುವ ಅವಕಾಶ ಸಿಕ್ಕಿದೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ.ದರ್ಶನ್ ಅಭಿನಯದ 50ನೇ ಸಿನಿಮಾ `ಕುರುಕ್ಷೇತ್ರ’ ಶೂಟಿಂಗ್ ಮುಗಿದಿದ್ದು, ತಮ್ಮ 51 ಸಿನಿಮಾದ ಚಿತ್ರೀಕರಣಕ್ಕೆ ದರ್ಶನ್ ಸದ್ಯದಲ್ಲೇ ಚಾಲನೆ ಕೊಡುತ್ತಿದ್ದಾರೆ. ಅದು ಮುಗಿದ ಬಳಿಕ ಶುರುವಾಗುವ ದರ್ಶನ್ ಅವರ 52ನೇ ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಮಾಡುತ್ತಾರೆ ಎನ್ನಲಾಗಿದೆ.50ನೇ ಸಿನಿಮಾ ರಿಲೀಸ್ ಆಗುವವರೆಗೂ ಮುಂದಿನ ಸಿನಿಮಾದ ಬಗ್ಗೆ ಮಾತನಾಡಲ್ಲ ಎಂದು ದರ್ಶನ್ ಹೇಳಿದ್ದಾರೆ. ಸದ್ಯಕ್ಕೆ ಚಂದನ್ ಶೆಟ್ಟಿ ಕೂಡ `ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಚಾರದ ಬಗ್ಗೆ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಚಂದನ್ ಶೆಟ್ಟಿ ನೀಡಿಲ್ಲ.Sign in to your account
Username or Email Address


Password

 Remember Me


