ಬೆಂಗಳೂರು: ಬಿಬಿಪಿಎಂಪಿಯ ಛಲವಾದಿ ಪಾಳ್ಯ ವಾರ್ಡ್ ಬಿಜೆಪಿ ಪಾಲಿಕೆ ಸದಸ್ಯೆ ರೇಖಾ ಅವರ ಪತಿಯನ್ನು ಹಾಡಹಗಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.ರೇಖಾ ಪತಿ ಕದೀರೇಶ್ ಅವರನ್ನು ದುಷ್ಕರ್ಮಿಗಳು ಬೆಂಗಳೂರಿನ ಆಂಜಿನಪ್ಪ ಗಾರ್ಡನ್ ಬಳಿ ಇರುವ ನಿವಾಸಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಇಂದು ಸಂಜೆ ಮುನೇಶ್ವರ ದೇವಸ್ಥಾನದ ನವೀಕರಣ ಕೆಲಸವನ್ನು ಕದಿರೇಶ್ ನಡೆಸುತ್ತಿದ್ದರು. ಸಂಜೆ 4 ಗಂಟೆಗೆ ಕದಿರೇಶ್ ನಿವಾಸಕ್ಕೆ ನುಗ್ಗಿದ ಮೂವರು ದುಷ್ಕರ್ಮಿಗಳು ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.ಈ ಹಿಂದೆ ಕೆಲ ಯುವಕರಿಗೆ ದೇವಸ್ಥಾನ ಬಳಿ ಗಾಂಜಾ ಹೋಡೆಯಬೇಡಿ ಮೃತ ಕದೀರೇಶ್ ಹೊಡೆದು ಕಳುಹಿಸಿದ್ದರು. ಈ ಕಾರಣಕ್ಕೆ ಈ ಹಿಂದೆ ಹಲವು ಬಾರಿ ಗಲಾಟೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


