ಮೈಸೂರು: ಜಿಲ್ಲೆಯ ಕೆಆರ್ ನಗರದ ಜೆಡಿಎಸ್ ಶಾಸಕ ಸಾರಾ ಮಹೇಶ್ ಸಭೆಯೊಂದರಲ್ಲಿ ತಮ್ಮ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.ಮೈಸೂರಿನ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಸರ್ಕಾರಿ ಶಿಕ್ಷಕರ ವಾರ್ಷಿಕೋತ್ಸವ ಸಮಾರಂಭದಲ್ಲಿ ತಮ್ಮ ಪುತ್ರ ಜಯಂತ್ ರನ್ನು ನೆನೆದ ಅವರು ಭಾವುಕರಾದರು. ನನ್ನ ಹೆಸರು ಕೆಡಿಸುವ ಹುನ್ನಾರ ಮಾಡಿ ನನ್ನ ಮಗನ ಹಳೆಯ ವಿಡಿಯೋ ಇಟ್ಟುಕೊಂಡು ಅವಮಾನಿಸಿದ್ದಾರೆ. ಇಂತಹ ರಾಜಕಾರಣ ಬೇಕಾ? ನನಗೆ ಸಾಕಾಗಿದೆ ಎಂದು ಕಣ್ಣೀರು ಹಾಕಿದರು. ಮಗನನ್ನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದು, ಮನೆಯಿಂದ ಹೊರಡುವಾಗಲೂ ಮಾತನಾಡಿಸಲು ಆಗಲಿಲ್ಲ ಎಂದರು.ಕಳೆದ ಕೆಲ ತಿಂಗಳ ಸಾರಾ ಮಹೇಶ್ ಅವರ ಪುತ್ರ ಯುವಕನೊಬ್ಬನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ನಡೆದ ಒಂದು ವರ್ಷದ ಬಳಿಕ ವಿಡಿಯೋ ಬಿಡುಗಡೆ ಮಾಡಲಾಗಿತ್ತು.ಶಾಸಕ ಮಹೇಶ್ ಅವರ ಪುತ್ರನ ಸ್ನೇಹಿತನ ಚಿನ್ನದ ಸರ ಕದ್ದ ಕಳ್ಳ ವಿಡಿಯೋದಲ್ಲಿ ಒದೆತಿಂದ ಯುವಕನಾಗಿದ್ದು, ಕಳ್ಳತನ ಮಾಡಿರುವ ಕುರಿತು ಆರೋಪಿಯನ್ನು ವಿಚಾರಣೆ ನಡೆಸುವ ವೇಳೆ ಆತನ ಮೇಲೆ ಹಲ್ಲೆ ಮಾಡಲಾಗಿತ್ತು. ಇದನ್ನೂ ಓದಿ:  ಜೆಡಿಎಸ್ ಶಾಸಕರ ಪುತ್ರ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್Sign in to your account
Username or Email Address


Password

 Remember Me


