ಬಳ್ಳಾರಿ: ಕಾಂಗ್ರೆಸ್ ಸೇರುವ ವಿಚಾರ ಎಲ್ಲಾ ಸುಳ್ಳು ವದಂತಿ. ನಾನು ಕಾಂಗ್ರೆಸ್ ಸೇರುವುದಾಗಿ ಎಲ್ಲಿಯೂ ಹೇಳಿಲ್ಲ. ನನ್ನ ಜೀವವಿರುವವರೆಗೂ ನಾನು ಬಿಜೆಪಿ ಬಿಡುವುದಿಲ್ಲವೆಂದು ಕಂಪ್ಲಿ ಶಾಸಕ ಸುರೇಶ್‍ಬಾಬು ಹೇಳಿದ್ದಾರೆ.ಶ್ರೀರಾಮುಲು ಸೋದರಳಿಯ ಸಹ ಕಾಂಗ್ರೆಸ್ ಸೇರ್ತಾರೆ ಅನ್ನೋ ಉಹಾಪೋಹಕ್ಕಿಂದು ಸ್ಪಷ್ಟನೆ ನೀಡಿದ ಸುರೇಶ್ ಬಾಬು, ನಾನು ಯಾರ ಮನೆಯ ಬಾಗಿಲು ತಟ್ಟಿಲ್ಲ. ನಮ್ಮ ಮನೆಯ ಬಾಗಿಲು ಗಟ್ಟಿಯಾಗಿದೆ. ನಾನು ಸ್ವಾಮಿ ನಿಷ್ಠೆಯಾಗಿ ಕೆಲಸಮಾಡುತ್ತೇವೆ ಹೊರತು ಸ್ವಾಮಿ ದ್ರೋಹಿಗಳಲ್ಲ ಅಂದ್ರು.ಬಳ್ಳಾರಿ ಜಿಲ್ಲೆಯಲ್ಲಿ ಸಂಸದ ಶ್ರಿರಾಮುಲು ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಅಲ್ಲದೇ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮಾನಸಿಕ ಒತ್ತಡ ಹೆಚ್ಚಾಗಿದೆ. ಡಿಕೆಶಿಯವರಿಗೂ ನನಗೂ ವೈಯುಕ್ತಿಕವಾಗಿ ಸ್ನೇಹವಿಲ್ಲ. ಡಿಕೆ ಶಿವಕುಮಾರ್ ಬರೀ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆಂದು ಸುರೇಶ್ ಬಾಬು ಕೈ ನಾಯಕರ ವಿರುದ್ಧ ಕಿಡಿಕಾರಿದ್ರು.ಬಿಜೆಪಿ ಪಕ್ಷ ನನಗೆ ಯಾವ ಜವಾಬ್ದಾರಿಯನ್ನು ನೀಡಿದರೂ ನಿಭಾಯಿಸುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆಗೆ ವಿಚಾರವನ್ನು ಅವರು ತಳ್ಳಿ ಹಾಕಿದರು.Sign in to your account
Username or Email Address


Password

 Remember Me


