ಮಂಗಳೂರು: ಶಾಲೆಯಲ್ಲಿ ತಪ್ಪು ಮಾಡಿದಳೆಂಬ ಕಾರಣಕ್ಕಾಗಿ ಯುವತಿಯನ್ನು 20 ವರ್ಷದಿಂದ ಮನೆಯ ಕತ್ತಲೆ ಕೋಣೆಯೊಳಗೆ ಕೂಡಿ ಹಾಕಿ ಮನೆ ಮಂದಿ ಅಮಾನವೀಯತೆ ಮೆರೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪದಲ್ಲಿ ನಡೆದಿದೆ.ಮಲ್ಲಿಕಾ (35) ಕತ್ತಲೆ ಕೋಣೆಯಲ್ಲಿದ್ದ ಯುವತಿ. ಕಳೆದ 20 ವರ್ಷದ ಹಿಂದೆ ಶಾಲೆಯಲ್ಲಿ ತಪ್ಪು ಮಾಡಿದಳೆಂಬ ಕಾರಣಕ್ಕಾಗಿ ಮಲ್ಲಿಕಾ ತಂದೆ ಮನೆಯ ಕೋಣೆಯ ಒಳಗೆ ಕೂಡಿ ಹಾಕಿದ್ದು, ಅಂದಿನಿಂದ ಇಂದಿನವರೆಗೆ ಮನೆ ಒಳಗೆಯೇ ಇದ್ದಾಳೆ. ಮಲ್ಲಿಕಾ ಬೆಳಕು ಕಾಣದೆ 20 ವರ್ಷ ಆಗಿತ್ತು.ಮಲ್ಲಿಕಾ ಅಕ್ಕ ದಿನಕ್ಕೆ ಒಂದು ಬಾರಿ ಆಕೆಗೆ ಊಟ ಕೊಟ್ಟು ಬಾಗಿಲು ಹಾಕಿ ಹೋಗುತ್ತಿದ್ದರು. 20 ವರ್ಷದಿಂದ ಇದೇ ಪರಿಪಾಟ ನಡೆಯುತ್ತಿದೆ. ಭಾನುವಾರದಂದು ಸ್ಥಳೀಯರು ಮನೆ ಬಳಿ ಹೋದಾಗ ವಿಷಯ ಗೊತ್ತಾಗಿದೆ. ಮನೆ ಮಂದಿ ಕೇಳಿದರೆ ಇದು ಕೌಟುಂಬಿಕ ವಿಚಾರ ಎಂದು ಗದರಿಸಿದ್ದಾರೆ.ಸ್ಥಳೀಯರು ಇಂದು ಮತ್ತೆ ಮನೆ ಬಳಿ ಹೋದಾಗ ಮಲ್ಲಿಕಾಳನ್ನು ಒಬ್ಬಂಟಿಯಾಗಿ ಬಿಟ್ಟು ಬಾಗಿಲು ಹಾಕಿ ಹೋಗಿದ್ದಾರೆ. ಮಾನವ ಹಕ್ಕುಗಳ ಆಯೋಗಕ್ಕೆ ಸ್ಥಳೀಯರು ಮಾಹಿತಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಮಲ್ಲಿಕಾ ತಂದೆ ತೀರಿ ಹೋಗಿದ್ದು, ತಾಯಿಗೆ ಹುಷಾರಿಲ್ಲದೇ ಮಗಳ ಮನೆ ಸೇರಿದ್ದಾರೆ.Sign in to your account
Username or Email Address


Password

 Remember Me


