ಕಲಬುರಗಿ: ವೃದ್ಧನಿಗೆ ಬೈಕ್ ಡಿಕ್ಕಿ ಹೊಡೆದಿದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಬೈಕ್ ಸವಾರನ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಕಲ್ಲಹಂಗರಗಾ ಗ್ರಾಮದ ಬಳಿ ನಡೆದಿದೆ.ಮೃತ ಯುವಕ ಜವಳಗಾ ಗ್ರಾಮದ ಅಂಬರೀಶ್ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಬೈಕ್ ಸವಾರ ಅಂಬರೀಶ್ ವೃದ್ಧ ಮಲ್ಲಯ್ಯರಿಗೆ ಡಿಕ್ಕಿ ಹೊಡೆದಿದ್ದಾನೆ. ಇದನ್ನು ಕಂಡ ಗ್ರಾಮಸ್ಥರು ಕೋಪಗೊಂಡು ಸವಾರನಿಗೆ ಥಳಿಸಿ, ಕೊಲೆ ಮಾಡಿ ನಂತರ ಶವವನ್ನ ರಸ್ತೆ ಪಕ್ಕದ ಬಾವಿಗೆ ಬಿಸಾಕಿದ್ದಾರೆ ಎನ್ನಲಾಗಿದೆ.ಈ ಕುರಿತು ಕುಟುಂಬಸ್ಥರು ಗ್ರಾಮಸ್ಥರು ಕೊಲೆದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಮಲ್ಲಯ್ಯ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.Sign in to your account
Username or Email Address


Password

 Remember Me


