ಕಾರವಾರ: ಕುಡಿತದ ಅಮಲಿನಲ್ಲಿ ಅಣ್ಣನೇ ಅಂಗವಿಕಲ ಸಹೋದರಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿಯ ಕುಚ್ಚೋಡಿಯ ಬಳಿ ನಡೆದಿದೆ.ಜ್ಯೋತಿ ಮಾದೇವ ನಾಯ್ಕ(27) ಕೊಲೆಯಾದ ಅಂಗವಿಕಲೆಯಾಗಿದ್ದು, ಸತೀಶ್ ಮಾದೇವ ನಾಯ್ಕ(35) ಕೊಲೆ ಮಾಡಿ ಆರೋಪಿ. ಅಂಗವಿಕಲೆಯಾಗಿದ್ದ ತಂಗಿಯನ್ನು ಸಾಕಲು ಕಷ್ಟ ಎಂಬ ಕಾರಣಕ್ಕೆ ಕುಡಿದ ಅಮಲಿನಲ್ಲಿ ಸತೀಶ್ ಕುತ್ತಿಗೆ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಮನೆಯಲ್ಲಿದ್ದ ತಾಯಿ, ಅತ್ತಿಗೆಯನ್ನು ಹೊರಗೆ ಓಡಿಸಿ ಈ ಕೃತ್ಯ ಎಸಗಿದ್ದಾನೆ.ಇನ್ನೋರ್ವ ಸಹೋದರ ರೋಹಿತ್ ನಾಯ್ಕ ದೂರಿನ ಮೇಲೆ ಆರೋಪಿಂ ಸತೀಶ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


