ಕೊಪ್ಪಳ: ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರು ತಂಬಿಗೆ ಮತ್ತು ಚಪ್ಪಲಿ ಎಸೆದ ಘಟನೆ ಭಾನುವಾರ ರಾತ್ರಿ ನಡೆದಿದೆ.ಗಂಗಾವತಿ ನಗರದ 28 ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ. ವಾರ್ಡ್ ವಿಸಿಟ್ ಗೆ ಬಂದ ವೇಳೆ ಶಾಸಕ ಅನ್ಸಾರಿ ಗೆ ಮಹಿಳೆಯರು ಘೇರಾವ್ ಹಾಕಿದ್ರು. ಸರಿಯಾದ ಶೌಚಾಲಯ ಇರದ ಹಿನ್ನಲೆಯಲ್ಲಿ ತಂಬಿಗೆ ಹಿಡಿದುಕೊಂದು ಅನ್ಸಾರಿ ಭಾಷಣಕ್ಕೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು.ಇದರಿಂದಾಗಿ ಕೆಲ ಕಾಲ 28ನೇ ವಾರ್ಡಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮತ್ತು ವಾರ್ಡ್ ಜನರ ಮಧ್ಯೆ ವಾಗ್ವಾದ ನಡೆಯಿತು. ಕಾರ್ಯಕ್ರಮದಿಂದ ಇಕ್ಬಾಲ್ ಅನ್ಸಾರಿ ಅರ್ಧಕ್ಕೆ ಹೊರಟುಹೋದ್ರು.ಮಹಿಳೆಯರು ಅನ್ಸಾರಿಗೆ ತಂಬಿಗೆ ಮತ್ತು ಚಪ್ಪಲಿ ಎಸೆದ ನಂತರ ಪೊಲೀಸ್ ರಿಂದ ಲಘು ಲಾಠಿ ಪ್ರಹಾರ ನಡೆಯಿತು.








 Advertisement 




Sign in to your account
Username or Email Address


Password

 Remember Me


