ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಪ್ರಧಾನಿಯವರ ಭಾಷಣ ಮುಗಿಯುತ್ತಿದ್ದಂತೆಯೇ ಮೋದಿ ಭಾಷಣಕ್ಕೆ ಸೆಡ್ಡು ನೀಡಲು ಕೆಪಿಸಿಸಿ ರೆಡಿಯಾಗಿದೆ.ಈಗಾಗಲೇ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದು, ಮೋದಿ ಭಾಷಣ ಮುಗಿದ ಕೂಡಲೇ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದೆ. ಈ ಮೂಲಕ ಪ್ರಧಾನಿಯವರ ಭಾಷಣಕ್ಕೆ ಟಾಂಗ್ ಕೊಡಲು ರೆಡಿಯಾಗಿದೆ.ಮೋದಿ ಭಾಷಣದ ವಿರುದ್ಧ ಸಂಜೆ 6 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ರಿಂದ ಸುದ್ದಿಗೋಷ್ಠಿ ನಡೆಯಲಿದೆ. ಒಟ್ಟಿನಲ್ಲಿ ಪ್ರಧಾನಿ ಮೋದಿಯವರ ಆರೋಪಗಳಿಗೆ ತಿರುಗೇಟು ನೀಡಲು ಕೆಪಿಸಿಸಿ ಸಿದ್ಧವಾಗಿದೆ ಎಂಬುವುದಾಗಿ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.






 Advertisement 




Sign in to your account
Username or Email Address


Password

 Remember Me


